alex Certify Big News: ರಾಷ್ಟ್ರ ರಾಜಧಾನಿಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ರಾಷ್ಟ್ರ ರಾಜಧಾನಿಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಏರಿಕೆಯಾಗಿದೆ. ಬುಧವಾರ (ಏ. 20)ರಂದು 1,009 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ದಿನವಹಿ ಏರಿಕೆ 60% ದಾಖಲಾಗಿದೆ. ಪಾಸಿಟಿವಿಟಿ ದರವೂ 5.7% ರಷ್ಟಿರುವುದು ಆತಂಕ ಮೂಡಿಸಿದೆ.

ಇದರಿಂದ ಎಚ್ಚೆತ್ತಿರುವ ದೆಹಲಿ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು, ಉಲ್ಲಂಘಿಸಿದರೆ 500 ರೂ. ದಂಡ ವಿಧಿಸುವುದಾಗಿಯೂ ಎಚ್ಚರಿಸಿದೆ.

24 ತಾಸುಗಳ ಅವಧಿಯಲ್ಲಿ 17,701 ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಪೈಕಿ 5.7% ಜನರಿಗೆ ಪಾಸಿಟಿವ್ ಪತ್ತೆಯಾಗಿದೆ. ಫೆಬ್ರವರಿ 10ರಂದು 1,104 ಸೋಂಕಿತರು ಪತ್ತೆಯಾದ ಮೇಲೆ ಇದೇ ಗರಿಷ್ಠವಾಗಿದೆ.

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯೂ 2,621ಕ್ಕೇರಿದ್ದು, ದೆಹಲಿಯಲ್ಲಿ ಸದ್ಯ54 ಕೋವಿಡ್-19 ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,578 ಜನರು ಕ್ವಾರಂಟೈನ್‌ನಲ್ಲಿದ್ದಾರೆ. ಕೋವಿಡ್ ಸೋಂಕಿತರಿಗಾಗಿ ಮೀಸಲಾಗಿರುವ 9,737 ಹಾಸಿಗೆಗಳ ಪೈಕಿ ಸದ್ಯ 91ರಲ್ಲಿ ಮಾತ್ರ ರೋಗಿಗಳಿದ್ದಾರೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಸದ್ಯಕ್ಕೆ ಮಾಸ್ಕ್ ಹೊರತುಪಡಿಸಿ ಬೇರಾವ ನಿರ್ಬಂಧಗಳನ್ನೂ ವಿಧಿಸದಿರಲು ಸರ್ಕಾರ ನಿರ್ಧರಿಸಿದೆ.

ಜತೆಗೆ, ಕೋವಿಡ್ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಹೇಳಿದೆ. ಇದು ಎಕ್ಸ್ಇಯಂತಹ ಹೊಸ ರೂಪಾಂತರವೇ ಎಂದು ತಿಳಿಯಲು ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...