ಪೊಲೀಸರು ಜನ ಜಾಗೃತಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿರುತ್ತಾರೆ. ಬಾಲಿವುಡ್ ಚಲನಚಿತ್ರಗಳಲ್ಲಿನ ಅಂಶಗಳನ್ನು ಹೆಕ್ಕಿ ತೆಗೆದು ಮೀಮ್ ಗಳಾಗಿ ಬಳಸುತ್ತಿವೆ.
ಇದೀಗ ದೆಹಲಿ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಹಂಚಿಕೊಂಡ ಪೋಸ್ಟ್ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ಪೋಸ್ಟ್ ರಸ್ತೆ ಸುರಕ್ಷತೆಯ ಬಗ್ಗೆ ತಿಳಿಸಿಕೊಡುತ್ತದೆ. ಭಾನುವಾರ ನಡೆದ ಏಷ್ಯಾ ಕಪ್ ಫೈನಲ್ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ನಡೆದ ರೋಮಾಂಚಕ ಆಟದ ಒಂದು ಸಂದರ್ಭವನ್ನು ಬಳಸಿಕೊಳ್ಳಲಾಗಿದೆ.
ಭಾನುಕಾ ರಾಜಪಕ್ಸೆ ಹೊಡೆದ ಚೆಂಡನ್ನು ಹಿಡಿಯಲು ಪ್ರಯತ್ನಿಸುವಾಗ ಶಾದಾಬ್ ಖಾನ್ ಮತ್ತು ಆಸಿಫ್ ಅಲಿ ನಡುವೆ ಸಂಭವಿಸಿದ ಡಿಕ್ಕಿಯನ್ನು ಪೊಲೀಸ್ ಇಲಾಖೆ ಜಾಣತನದಿಂದ ಬಳಸಿಕೊಂಡಿದೆ. ಮನ್ನಾ ಡೇ ಅವರ ಆಯೆ ಭಾಯಿ ಜರಾ ದೇಖ್ ಕೆ ಚಲೋ…… ಹಾಡು ಹಿನ್ನಲೆಯಲ್ಲಿ ಪ್ಲೇ ಮಾಡಲಾಗಿದೆ.
“ಏ ಭಾಯಿ, ಜರಾ ದೇಖ್ ಕೆ ಚಲೋ,” ರಸ್ತೆ ಸುರಕ್ಷತೆ ಮತ್ತು ಏಷ್ಯಾ ಕಪ್ ಫೈನಲ್ 2022 ರ ಹ್ಯಾಶ್ಟ್ಯಾಗ್ಗಳೊಂದಿಗೆ ಪೋಸ್ಟ್ನ ಶೀರ್ಷಿಕೆಯಾಗಿದೆ.
ಈ ವಿಡಿಯೊವನ್ನು ಸುಮಾರು 3 ಲಕ್ಷ ಮಂದಿ ವೀಕ್ಷಿಸಿದ್ದು, ಸ್ವಾರಸ್ಯಕರ ಕಾಮೆಂಟ್ ಬಂದಿದೆ. “ದೆಹಲಿ ಪೊಲೀಸ್ ರಾಕ್ಸ್” ಎಂದು ಒಬ್ಬರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.