ನವದೆಹಲಿ: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಥವಾ ವಾಹನಗಳನ್ನು ಚಲಾಯಿಸುತ್ತಿದ್ದರೆ ಮೊಬೈಲ್ ಫೋನ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು ಎಂದು ಪೊಲೀಸರು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರೂ ಎಷ್ಟೋ ಮಂದಿ ಇದನ್ನು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ಇದು ಅಪಾಯಕಾರಿ ಎಂಬುದು ಗೊತ್ತಿರುವ ವಿಷಯವೇ. ಒಂದು ಸೆಕೆಂಡ್ ಮೊಬೈಲ್ನಲ್ಲಿ ಮೈಮರೆತರೂ ಅದು ಅಪಘಾತಗಳಿಗೆ ಕಾರಣವಾಗಬಹುದು. ಇಷ್ಟೆಲ್ಲಾ ಎಚ್ಚರಿಕೆಗಳ ನಂತರವೂ, ಅನೇಕ ಜನರು ಈ ಅಭ್ಯಾಸವನ್ನು ಬಿಟ್ಟಿಲ್ಲ.
ಮೊಬೈಲ್ನಲ್ಲಿ ಮೈಮರೆತರೆ ಏನೆಲ್ಲಾ ಎಡವಟ್ಟುಗಳಾಗಬಹುದು ಎಂಬ ಬಗ್ಗೆ ದೆಹಲಿ ಪೊಲೀಸರು ಶೇರ್ ಮಾಡಿಕೊಂಡಿರುವ ಈ ವಿಡಿಯೋದಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ಜನರು ನಡೆಯುವಾಗ ಅಥವಾ ಚಾಲನೆ ಮಾಡುವಾಗ ಫೋನ್‌ಗಳನ್ನು ಬಳಸಿದರೆ ಹೇಗೆಲ್ಲಾ ಅಪಾಯಗಳು ಎದುರಾಗುತ್ತವೆ ಎಂಬ ಬಗ್ಗೆ ಈ ವಿಡಿಯೋ ತೋರಿಸುತ್ತದೆ.
“ಅನೇಕ ಜನರು ನಡೆಯುತ್ತಾ, ಚಾಲನೆ ಮಾಡುತ್ತಾ ಮೆಸೇಜ್ ಕಳಿಸುತ್ತಿರುತ್ತಾರೆ, ಅಥವಾ ಬಂದ ಮೆಸೇಜ್ ಓದುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಅವಘಡಗಳು ಆಗುತ್ತವೆ. ಎಷ್ಟು ಹೇಳಿದರೂ ಇಂಥದ್ದು ನಡೆದೇ ಇದೆ” ಎಂದಿರುವ ಅವರು ಅವಘಡಗಳ ಸಂದೇಶ ಸಾರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. 40-ಸೆಕೆಂಡ್‌ಗಳ ವೀಡಿಯೊ ಭಾರಿ ವೈರಲ್ ಆಗಿದೆ.
https://twitter.com/NeerajG30055082/status/1589529136812691456?ref_src=twsrc%5Etfw%7Ctwcamp%5Etweetembed%7Ctw