ದೆಹಲಿ: ಮಹಿಳೆಯರ ಫೋಟೋಗಳನ್ನು ಅವರ ಒಪ್ಪಿಗೆಯಿಲ್ಲದೆ ಅಪ್ಲೋಡ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮೊಬೈಲ್ ಅಪ್ಲಿಕೇಷನ್ ನ ರಚನೆಕಾರರ ವಿರುದ್ಧ ದೆಹಲಿ ಪೊಲೀಸ್ ಎಫ್ಐಆರ್ ದಾಖಲಿಸಿದೆ.
ಈ ಪ್ರಕರಣವು `SULLI DEAL` ಹೆಸರಿನ ಅಪ್ಲಿಕೇಶನ್ ಗೆ ಸಂಬಂಧಿಸಿದೆ. ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರ ಒಪ್ಪಿಗೆಯಿಲ್ಲದೆ ಅಪ್ಲೋಡ್ ಮಾಡಿರುವ ಹಾಗೂ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಆರೋಪದ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
`SULLI DEAL` ಮಹಿಳೆಯರ ಫೋಟೋಗಳನ್ನು ಅನುಮತಿಯಿಲ್ಲದೆ ಅಪ್ಲೋಡ್ ಮಾಡುವುದು ಮಾತ್ರವಲ್ಲದೆ, ಕಳವು ಮಾಡಿದ ಫೋಟೋಗಳನ್ನು ಹರಾಜು ಮಾಡಲು ಹೋಸ್ಟಿಂಗ್ ಫ್ಲಾಟ್ ಫಾರಂ ಗಿಥ್ ಹಬ್ ಅನ್ನು ಬಳಸಿತ್ತು.
ʼಪದ್ಮ ಪ್ರಶಸ್ತಿʼ ಕುರಿತಂತೆ ಪ್ರಧಾನಿ ಮೋದಿಯವರಿಂದ ಮಹತ್ವದ ಮಾಹಿತಿ
`SULLI DEAL` ಮೊಬೈಲ್ ಅಪ್ಲಿಕೇಶನ್ ಗೆ ಸಂಬಂಧಿಸಿದಂತೆ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ನಲ್ಲಿ ಸ್ವೀಕರಿಸಿದ ದೂರಿನ ಮೇರೆಗೆ, ಐಪಿಸಿ ಸೆಕ್ಷನ್ 354-ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿರುವ ಸೈಬರ್ ಅಪರಾಧ ಘಟಕ ತನಿಖೆ ಕೈಗೆತ್ತಿಕೊಂಡಿದೆ. ಇನ್ನು ಇದಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಗಿಥ್ ಹಬ್ ಗೆ ನೋಟಿಸ್ ಕಳುಹಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.