ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ ಸಹಾಯಕ ಪಿ.ಪಿ. ಮಾಧವನ್ ಎಂಬವರ ವಿರುದ್ಧ ದೆಹಲಿಯ ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ದಲಿತ ಮಹಿಳೆಯೊಬ್ಬರಿಗೆ ಕಾಂಗ್ರೆಸ್ ಕಚೇರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಾಧವನ್, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಲಾಗಿದೆ.
ಜೂನ್ 25ರಂದು ಮಹಿಳೆ ದೂರು ನೀಡಿದ್ದು ಮಾಧವನ್ ವಿರುದ್ಧ ಐಪಿಸಿ 376 ಮತ್ತು 506 ನೇ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದರ ಮಧ್ಯೆ ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಧವನ್, ಇದು ನಿರಾಧಾರ ಮತ್ತು ನನ್ನ ವಿರುದ್ಧ ಮಾಡಲಾಗಿರುವ ಪಿತೂರಿ ಎಂದು ಹೇಳಿದ್ದಾರೆ.