ನವದೆಹಲಿ: ನಿನ್ನೆ ಪ್ರತಿಭಟನಾನಿರತ ರೈತರನ್ನು ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಗೃಹಬಂಧನ ವಿಧಿಸಲಾಗಿದೆ. ಅವರು ಮನೆಯಿಂದ ಹೊರ ಹೋಗದಂತೆ ಪೊಲೀಸರು ತಡೆ ನೀಡಿದ್ದಾರೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ ರೈತರನ್ನು ಭೇಟಿಯಾಗಿದ್ದು ಆಮ್ ಆದ್ಮಿ ಪಕ್ಷ ಬಂದ್ ಗೆ ಬೆಂಬಲ ನೀಡಿದೆ. ಪ್ರತಿಭಟನೆಯಲ್ಲಿ ಅರವಿಂದ್ ಕೇಜ್ರಿವಾಲ್ ಭಾಗವಹಿಸುವ ಸಾಧ್ಯತೆ ಹಿನ್ನಲೆಯಲ್ಲಿ ಅವರಿಗೆ ಗೃಹಬಂಧನದಲ್ಲಿ ಇಡಲಾಗಿದೆ ಎಂದು ಹೇಳಲಾಗಿದೆ.