ನವದೆಹಲಿ: ದೆಹಲಿಯಲ್ಲಿ ಅರೆಸೇನಾಪಡೆ ನಿಯೋಜಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
ಪ್ಯಾರಾ ಮಿಲಿಟರಿ ತುಕಡಿಗಳನ್ನು ನಿಯೋಜಿಸಬೇಕೆಂದು ಮನವಿ ಮಾಡಲಾಗಿದೆ. ರೈತರ ಪ್ರತಿಭಟನೆ ತಡೆಯುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ದೆಹಲಿಯ ಐಟಿಒ ಪ್ರದೇಶದಲ್ಲಿ ಸೇರಿರುವ ನೂರಾರು ರೈತರ ಮನವೊಲಿಸಿ ಚದುರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.
ವಾಪಸಾಗುವಂತೆ ರೈತರ ಮನವೊಲಿಸಲು ಪೊಲೀಸರ ಪ್ರಯತ್ನ ಮುಂದುವರೆದಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹೆಚ್ಚಿನ ಪೊಲೀಸರನ್ನು ದೆಹಲಿ ಭದ್ರತೆಗೆ ನಿಯೋಜಿಸಲು ಸೂಚನೆ ನೀಡಲಾಗಿದೆ. ದೆಹಲಿಯಲ್ಲಿನ ಹಿಂಸಾಚಾರದ ಸಿಸಿಟಿವಿ ದೃಶ್ಯ ಬಿಡುಗಡೆಮಾಡಲಾಗಿದ್ದು, ಪೊಲೀಸರ ಗುಂಡೇಟಿನಿಂದ ರೈತ ಮೃತಪಟ್ಟಿಲ್ಲವೆಂದು ಸ್ಪಷ್ಟನೆ ನೀಡಲಾಗಿದೆ.