ನವದೆಹಲಿ: ದೆಹಲಿಯ ಕಲ್ಕಾಜಿ ಮಂದಿರದಲ್ಲಿ ತಡರಾತ್ರೊ ಮರ ಮತ್ತು ಕಬ್ಬಿಣದ ಚೌಕಟ್ಟಿನಿಂದ ಮಾಡಿದ ಪ್ಲಾಟ್ಫಾರ್ಮ್ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 17 ಜನರು ಗಾಯಗೊಂಡಿದ್ದಾರೆ.
ಕಲ್ಕಾಜಿ ಮಂದಿರದಲ್ಲಿ ಮಹಂತ್ ಪರಿಸರ್ನಲ್ಲಿ ನಡೆದ “ಮಾತಾ ಜಾಗರಣ್” ಕಾರ್ಯಕ್ರಮದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ದೆಹಲಿ ಪೊಲೀಸರ ಪ್ರಕಾರ, ಈ ಕಾರ್ಯಕ್ರಮವನ್ನು ನಡೆಸಲು ಯಾವುದೇ ಅನುಮತಿ ನೀಡಲಾಗಿಲ್ಲ. “ಜಾಗರಣ್ನಲ್ಲಿ ಸುಮಾರು 1,500 ರಿಂದ 1,600 ಜನರು ಸೇರಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪಡೆದ ನಂತರ, ಅಪರಾಧ ತಂಡವು ಸ್ಥಳಕ್ಕೆ ಭೇಟಿ ನೀಡಿತು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರ ಸ್ಥಿತಿ ಸ್ಥಿರವಾಗಿದೆ. ಆದಾಗ್ಯೂ, ಕೆಲವು ಜನರು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಸಂಘಟಕರ ವಿರುದ್ಧ ಐಪಿಸಿ ಸೆಕ್ಷನ್ 337/304ಎ/188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.