ಕಳೆದ ಕೆಲವು ದಿನಗಳಿಂದ ದೆಹಲಿ ಮೆಟ್ರೋ ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ಘರ್ಷಣೆಗಳು ನಡೆಯುತ್ತಿರುವ ವಿಡಿಯೋಗಳು ಒಂದಾದರ ಮೇಲೊಂದರಂತೆ ವೈರಲ್ ಆಗುತ್ತಲೇ ಇದೆ. ಕುಳಿತುಕೊಳ್ಳುವ ವಿಚಾರಗಳ ಜಗಳ, ಟೀ ಶರ್ಟ್ ವಿಚಾರಕ್ಕೆ ಕುಸ್ತಿ ಹೀಗೆ ಸಣ್ಣ ಸಣ್ಣ ಕಾರಣಕ್ಕೆ ವಾಗ್ವಾದಗಳು ಉಂಟಾಗಿವೆ, ಇದೀಗ ಈ ಸಾಲಿಗೆ ಇನ್ನೊಂದು ಪ್ರಕರಣ ಸೇರ್ಪಡೆಯಾಗಿದ್ದು ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳು ಯುವಕನಿಗೆ ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಅಲ್ಲಿರುವ ಪ್ರಯಾಣಿಕರು ನೀಡಿರುವ ಮಾಹಿತಿಯ ಪ್ರಕಾರ ಯುವಕ ಹಾಗೂ ಯುವತಿ ಪರಸ್ಪರ ಪರಿಚಯಸ್ಥರು ಎನ್ನಲಾಗಿದೆ. @gharkekalesh ಎಂಬ ಟ್ವಿಟರ್ ಖಾತೆಯಿಂದ ಈ ವಿಡಿಯೋ ಶೇರ್ ಆಗಿದ್ದು ಚೆಕ್ಸ್ ಶರ್ಟ್ ಧರಿಸಿದ್ದ ಯುವತಿಯು ಮೆಟ್ರೋದಲ್ಲಿ ತನ್ನ ಪಕ್ಕದಲ್ಲಿಯೇ ನಿಂತಿದ್ದ ವ್ಯಕ್ತಿಯನ್ನು ನಿಂದಿಸಿ, ಥಳಿಸಿದ್ದಾಳೆ. ಆತನಿಗೆ ಕಪಾಳ ಮೋಕ್ಷವನ್ನೂ ಮಾಡಿದ್ದಾಳೆ. ಆದರೆ ಇಬ್ಬರ ನಡುವೆ ವಾಗ್ವಾದ ಏಕಾಯ್ತು ಎಂಬುದಕ್ಕೆ ಕಾರಣ ಇನ್ನೂ ತಿಳಿದಿಲ್ಲ.
ಮೆಟ್ರೋದಲ್ಲಿದ್ದ ಇತರೆ ಪ್ರಯಾಣಿಕರು ಈ ಘಟನೆಯ ವಿಡಿಯೋ ಮಾಡೋದ್ರಲ್ಲಿಯೇ ನಿರತರಾಗಿದ್ದರೇ ಹೊರತು ಯಾರೂ ಕೂಡ ಇಬ್ಬರ ನಡುವೆ ಸಂಧಾನ ನಡೆಸುವ ಅಥವಾ ಈ ಜಗಳ ಯಾವ ಕಾರಣಕ್ಕೆ ಆಯ್ತು ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೇ ಇದ್ದದ್ದು ವಿಪರ್ಯಾಸವೇ ಸರಿ ..!
https://twitter.com/i/status/1675914542214430720