ದೆಹಲಿ ಮೆಟ್ರೋ ಸವಾರರು ಏನಾದರೊಂದು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವಲ್ಲಿ ಹಿಂದೆ ಬೀಳುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಯುವತಿಯೊಬ್ಬಳು ಟೂ-ಪೀಸ್‌ನಲ್ಲಿ ಮೆಟ್ರೋ ಸವಾರಿ ಮಾಡುವ ಮೂಲಕ ಸುದ್ದಿ ಮಾಡಿದ್ದಳು.
ಇದೀಗ ಇಬ್ಬರು ಪುರುಷರು ಸ್ಕರ್ಟ್ ಧರಿಸಿ ದೆಹಲಿ ಮೆಟ್ರೋ ನಿಲ್ದಾಣವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವಿಚಿತ್ರ ಫ್ಯಾಶನ್ ಮ್ಯಾನರಿಸಂನಿಂದ ಹೆಸರು ಮಾಡಿರುವ ಸಮೀರ್ ಖಾನ್ ಹಾಗೂ ಆತನ ಸ್ನೇಹಿತ ಭವ್ಯ್ ಹೀಗೆ ಡೆನಿಮ್ ಸ್ಕರ್ಟ್ ಧರಿಸಿಕೊಂಡು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ.
ವಿಶಿಷ್ಟ ನೆಕ್ಲೇಸ್‌ಗಳು ಹಾಗೂ ಸನ್ ಗ್ಲಾಸ್‌ಗಳೊಂದಿಗೆ ತಮ್ಮ ಗೆಟಪ್ ಅನ್ನು ಇನ್ನಷ್ಟು ಆಕರ್ಷಕವಾಗಿಸಿದ್ದಲ್ಲದೇ, ಕ್ಲೌಟ್ ಚೇಸರ್ಸ್,” ಎಂದು ಕ್ಯಾಪ್ಷನ್ ಕೊಟ್ಟು ಸಮೀರ್ ಖಾನ್ ತಮ್ಮ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://youtu.be/WKL7jIqa-ww