ಇತ್ತೀಚೆಗೆ, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಮೆಟ್ರೋ ಕೋಚ್‌ಗಳಲ್ಲಿ ಇನ್‌ಸ್ಟಾಗ್ರಾಮ್ ರೀಲ್ ಮಾಡುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಂತಹ ವೀಡಿಯೊಗಳು ಕಂಟೆಂಟ್ ರಚನೆಕಾರರಿಗೆ ಸಾಕಷ್ಟು ವೀಕ್ಷಣೆಗಳು ಮತ್ತು ಇಷ್ಟಗಳನ್ನು ತರಬಹುದಾದರೂ ಸಹ ಪ್ರಯಾಣಿಕರಿಗೆ ತೊಂದರೆ ಮತ್ತು ಅನಾನುಕೂಲತೆಯ ಮೂಲವಾಗಿದೆ.
ಇದೇ ಕಾರಣಕ್ಕೆ ಮೆಟ್ರೋ ಕೋಚ್‌ಗಳಲ್ಲಿ ವೀಡಿಯೊಗಳನ್ನು ಚಿತ್ರೀಕರಿಸಬೇಡಿ ಎಂದು ಡಿಎಂಆರ್‌ಸಿ ಪ್ರಯಾಣಿಕರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ. ಇದರ ಹೊರತಾಗಿಯೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈಗ ಪುನಃ ಅದೇ ಸಂದೇಶವನ್ನು ನೀಡಲಾಗಿದೆ. ವೀಡಿಯೊಗಳನ್ನು ರೆಕಾರ್ಡ್ ಮಾಡುವುದನ್ನು ನಿಷೇಧಿಸಲಾಗಿದೆ.
“ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ರೀಲ್‌ಗಳು, ನೃತ್ಯ ವೀಡಿಯೊಗಳು ಅಥವಾ ಅಂತಹ ಯಾವುದೇ ಚಟುವಟಿಕೆಗಳನ್ನು ದೆಹಲಿ ಮೆಟ್ರೋ ಒಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ” ಎಂದು ಬರೆದಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ತುಂಬಾ ಕಿರಿಕಿರಿ ವಿಷಯವಾಗಿದೆ. ಬರೀ ಸಂದೇಶ ನೀಡಿದರೆ ಸಾಲದು. ಹೀಗೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.