ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಯಾರಿಗೆ ಅಧಿಕಾರ ಸಿಗಲಿದೆ ಎನ್ನುವ ಲೆಕ್ಕಾಚಾರಕ್ಕೆ ತೆರೆ ಬೀಳಲಿದೆ.
ದೆಹಲಿಯ 250 ವಾರ್ಡ್ ಗಳಿಗೆ ಡಿಸೆಂಬರ್ 4ರಂದು ಮತದಾನ ನಡೆದಿದ್ದು ಶೇಕಡ 51.03 ಪುರುಷರು ಹಾಗೂ ಶೇಕಡ 49.83 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಲಭ್ಯ ಮಾಹಿತಿಗಳ ಪ್ರಕಾರ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಅಧಿಕಾರಕ್ಕೇರಲು ಭಾರಿ ಪೈಪೋಟಿಯೇ ನಡೆದಿದೆ. 123 ವಾರ್ಡ್ ಗಳಲ್ಲಿ ಬಿಜೆಪಿ ಹಾಗೂ 123 ವಾರ್ಡ್ ಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್ ಆರು ಹಾಗು ಇತರರು ಒಂದು ವಾರ್ಡ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಚುನಾವಣೋತ್ತ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯಗಳಿಸಲಿದೆ ಎಂದು ಹೇಳಲಾಗಿತ್ತು.. ಬಿಜೆಪಿ ಕೂಡ ಅಧಿಕಾರಕ್ಕೇರುವ ಭರವಸೆಯಲ್ಲಿದ್ದು, ಮಧ್ಯಾಹ್ನದೊಳಗೆ ಎಲ್ಲಾ ವಾರ್ಡ್ ಗಳ ಫಲಿತಾಂಶ ಪ್ರಕಟವಾಗಲಿದೆ.