
ದೆಹಲಿ ಮೆಟ್ರೋದ ಒಟ್ಟು 286 ನಿಲ್ದಾಣಗಳನ್ನು 15 ಗಂಟೆ 22 ನಿಮಿಷ 49 ಸೆಕೆಂಡುಗಳಲ್ಲಿ ಕ್ರಮಿಸಿ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಶಶಾಂಕ್ ಮನು ಎಂದು ಗುರುತಿಸಲ್ಪಟ್ಟ ವ್ಯಕ್ತಿ ಫ್ರೀಲ್ಯಾನ್ಸ್ ರಿಸರ್ಚರ್ ಆಗಿ ಕೆಲಸ ಮಾಡುತ್ತಿದ್ದು ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಅವರು ಬೆಳಿಗ್ಗೆ 5 ಗಂಟೆಗೆ ನೀಲಿ ಮಾರ್ಗದಲ್ಲಿ ಪ್ರಯಾಣ ಪ್ರಾರಂಭಿಸಿ ಬ್ರಿಗೇಡಿಯರ್ ಹೋಶಿಯಾರ್ ಸಿಂಗ್ ನಿಲ್ದಾಣದಲ್ಲಿ ರಾತ್ರಿ 8:30 ಕ್ಕೆ ಪ್ರಯಾಣ ಪೂರ್ಣಗೊಳಿಸಿದರು. ಬ್ರಿಗೇಡಿಯರ್ ಹೋಶಿಯಾರ್ ಸಿಂಗ್ ನಿಲ್ದಾಣ ಹಸಿರು ಮಾರ್ಗದಲ್ಲಿರುವ ಬರುವ ನಿಲ್ದಾಣಗಳಲ್ಲೊಂದು.
ತಮ್ಮ ದಾಖಲೆ ಬಗ್ಗೆ ಮಾತನಾಡಿದ ಶಶಾಂಕ್ ಮನು ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ಕವರ್ ಮಾಡುವ ಕಲ್ಪನೆಯು ಕರೋನ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಬಂದಿತು. ಮೊದಲ ಲಾಕ್‌ಡೌನ್ ನಂತರ ಮೆಟ್ರೋ ಸೇವೆಗಳು ಪುನರಾರಂಭಗೊಂಡಾಗ ಅದನ್ನ ಪ್ರಯತ್ನಿಸಿದ್ದಾಗಿ ಹೇಳಿದರು. ಏಪ್ರಿಲ್ 2023 ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಿಂದ ತಮ್ಮ ಪ್ರಮಾಣಪತ್ರವನ್ನು ಪಡೆದಿದ್ದಾಗಿ ತಿಳಿಸಿದರು. “ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ಅತಿ ವೇಗವಾಗಿ ಕಡಿಮೆ ಸಮಯದಲ್ಲಿ ಪ್ರಯಾಣ” ಎಂದು ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೊಂದಿದ್ದಾರೆ.
ದಾಖಲೆ ನಿರ್ಮಿಸುವಾಗ ಮನು ಬಹುತೇಕ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಫೋಟೋಗಳನ್ನು ತೆಗೆದುಕೊಂಡರು. ಅಲ್ಲದೆ ಅವರು ಸಾರ್ವಜನಿಕರಿಗೆ ರಶೀದಿಗೆ ಸಹಿ ಹಾಕುವಂತೆ ಕೇಳಿಕೊಂಡರು ಮತ್ತು ಅವರ ಪ್ರಯಾಣದ ಉದ್ದಕ್ಕೂ ಸ್ವತಂತ್ರ ಸಾಕ್ಷಿಗಳನ್ನು ಹೊಂದಿದ್ದರು. ಇಡೀ ಪ್ರಯತ್ನದ ವಿಡಿಯೋವನ್ನೂ ರೆಕಾರ್ಡ್ ಮಾಡಿದ್ದಾರೆ. ಅವರು ಪ್ರತಿ ನಿಲ್ದಾಣದಲ್ಲಿ ರೈಲು ಕೋಚ್‌ನ ಬಾಗಿಲುಗಳ ಪ್ರಾರಂಭ ಮತ್ತು ಮುಚ್ಚುವ ಸಮಯದ ದಾಖಲೆಯನ್ನು ಇರಿಸಿಕೊಳ್ಳಲು ಮತ್ತು ಟ್ರ್ಯಾಕ್ ಮಾಡಲು ದಾಖಲೆಯನ್ನ ಹೊಂದಿದ್ದಾರೆ.