alex Certify ಪತ್ನಿಯೊಂದಿಗೆ ಜಗಳ: ಮಗುವನ್ನು ಎಸೆದು ಮೊದಲ ಮಹಡಿಯಿಂದ ತಾನೂ ಹಾರಿದ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯೊಂದಿಗೆ ಜಗಳ: ಮಗುವನ್ನು ಎಸೆದು ಮೊದಲ ಮಹಡಿಯಿಂದ ತಾನೂ ಹಾರಿದ ಪತಿ…!

ನವದೆಹಲಿ: ಪತ್ನಿಯೊಂದಿಗೆ ಜಗಳವಾಡಿ ತನ್ನ ಎರಡು ವರ್ಷದ ಮಗುವನ್ನು ಮೊದಲನೇ ಮಹಡಿಯಿಂದ ಎಸೆದು, ತಾನೂ ಹಾರಿದ ಭೀಕರ ಘಟನೆ ದೆಹಲಿಯ ಕಾಲ್‌ಕಾಜೀ ಪ್ರದೇಶದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಈತ ಹೀಗೆ ಮಾಡಿದ್ದಾನೆ ಎನ್ನಲಾಗಿದೆ.

ಘಟನೆಯಲ್ಲಿ ಆರೋಪಿ ಮನ್‌ ಸಿಂಗ್ (30) ಮತ್ತು ಪುತ್ರ ಇಬ್ಬರೂ ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೂಜಾ ಅವರು ಗಂಡನ ಕಿರುಕುಳದಿಂದ ಬೇಸತ್ತು ಮಗುವಿನ ಜತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಅಜ್ಜಿಯೊಂದಿಗೆ ಇವರು ನೆಲೆಸಿದ್ದಾರೆ. ಕುಡಿದು ಬಂದ ಆರೋಪಿ ಪತ್ನಿ ಇರುವಲ್ಲಿಗೆ ಬಂದು ಜಗಳ ಆರಂಭಿಸಿದ್ದಾನೆ. ಜಗಳ ತಾರಕಕ್ಕೇರಿದ ಬಳಿಕ ಮೊದಲನೇ ಮಹಡಿಗೆ ಮಗುವನ್ನು ಹೊತ್ತೊಯ್ದು 21 ಅಡಿ ಎತ್ತರದಿಂದ ಹೊರಗೆ ಎಸೆದಿದ್ದಾನೆ. ನಂತರ ತಾನೂ ಹಾರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...