ಮಹಾ ಮಹಾನಗರಗಳಲ್ಲಿ ವಾಹನ ನಿಲ್ಲಿಸುವ ವಿಚಾರದಲ್ಲಿ ಗಲಾಟೆ ನಡೆಯುವುದು ಸಾಮಾನ್ಯ ಸಂಗತಿ. ಇದೇ ರೀತಿ ರಾಜ್ಯ ರಾಜಧಾನಿ ನವದೆಹಲಿಯಲ್ಲೂ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದ ವೇಳೆ ಯುವಕನೊಬ್ಬ 42 ವರ್ಷದ ವ್ಯಕ್ತಿ ಮೇಲೆ ಗುಂಡು ಹಾರಿಸಿದ್ದಾನೆ.
ಘಟನೆ ದೆಹಲಿಯ ವಿಕಾಸ್ ನಗರ ಪ್ರದೇಶದಲ್ಲಿ ಶುಕ್ರವಾರದಂದು ನಡೆದಿದ್ದು, ಆರೋಪಿ ಆಶಿಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಶೇರ್ ಸಿಂಗ್ ಎಂಬವರ ಮೇಲೆ ಗುಂಡು ಹಾರಿಸಿದ್ದು ಅದೃಷ್ಟವಶಾತ್ ಆತ ಅಪಾಯದಿಂದ ಪಾರಾಗಿದ್ದಾರೆ.
ಶೇರ್ ಸಿಂಗ್ ಸೋಮವಾರ ಸಂಜೆ ತಮ್ಮ ಅಂಗಡಿಯ ಮುಂದೆ ಕುಳಿತಿದ್ದಾಗ ನೆರೆಮನೆಯ ಆಶಿಶ್ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಪಾರ್ಕಿಂಗ್ ವಿಚಾರದಲ್ಲಿ ಇವರಿಬ್ಬರ ನಡುವೆ ಮೊದಲಿನಿಂದಲೂ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಹೀಗಾಗಿ ತನ್ನ ಸ್ನೇಹಿತನೊಬ್ಬನಿಂದ ಕಂಟ್ರಿ ಮೇಡ್ ಪಿಸ್ತೂಲ್ ಖರೀದಿಸಿದ್ದ ಆಶಿಶ್, ಅದರಿಂದ ಶೇರ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾನೆ.
ಗಾಯಗೊಂಡಿದ್ದ ಶೇರ್ ಸಿಂಗ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆರೋಪಿ ಆಶಿಶ್ ನನ್ನು ಬಂಧಿಸಿರುವ ಪೊಲೀಸರು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.