ನವದೆಹಲಿ: ತನ್ನ ತಂದೆ ‘ಬ್ಲಾಕ್ ಮ್ಯಾಜಿಕ್’ ಮಾಡ್ತಾರೆ ಎಂದು ಶಂಕಿಸಿದ ದೆಹಲಿಯ ವ್ಯಕ್ತಿ ಮೊಬೈಲ್ ಕ್ಯಾಮೆರಾವನ್ನು ಹೊಂದಿಸಿಟ್ಟಿದ್ದು, ಅದರಲ್ಲಿ ಆತನ ತಂದೆ ಹುಡುಗಿಯ ಮೇಲೆ ಅತ್ಯಾಚಾರ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.
ದೆಹಲಿಯ ಬುರಾರಿಯಲ್ಲಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ 68 ವರ್ಷದ ತಂದೆ ಮಾಟಮಂತ್ರವನ್ನು ಮಾಡುತ್ತಿದ್ದಾನೆ ಎಂದು ಶಂಕಿಸಿ ತನ್ನ ಮೊಬೈಲ್ ಕ್ಯಾಮೆರಾವನ್ನು ಹೊಂದಿಸಿಟ್ಟಿದ್ದಾನೆ. ಅವನಿಗೆ ವಿಡಿಯೋ ಪ್ಲೇ ಮಾಡುವವರೆಗೂ ಕ್ಯಾಮೆರಾದಲ್ಲಿ ಏನು ಸೆರೆಯಾಗಿದೆ ಎಂದು ಗೊತ್ತಿರಲಿಲ್ಲ.
ತನ್ನ ತಂದೆ ನೆರೆ ಮನೆಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡುತ್ತಿರುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಣವಾಗಿರುವುದನ್ನು ವ್ಯಕ್ತಿ ನೋಡಿದ್ದಾನೆ. ಅಲ್ಲದೇ, ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಬಾಲಕಿಯ ತಂದೆಯೊಂದಿಗೆ ಹಂಚಿಕೊಂಡಿದ್ದು, ಅವರು ದೆಹಲಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ವ್ಯಕ್ತಿ ಮತ್ತು ಆತನ ತಂದೆ ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಜೂನ್ 27 ರಂದು ಬುರಾರಿ ಪೊಲೀಸ್ ಠಾಣೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಅಪ್ರಾಪ್ತ ಮಗಳ ಮೇಲೆ ತಮ್ಮ ನೆರೆಹೊರೆಯ 68 ವರ್ಷದ ವ್ಯಕ್ತಿಯಿಂದ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದಾಗ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ.
68 ವರ್ಷದ ವ್ಯಕ್ತಿ ತಾನು ವಾಸಿಸುತ್ತಿದ್ದ ವಸತಿ ಸಮುಚ್ಚಯದ ನಿವಾಸಿಯಾಗಿರುವುದರಿಂದ ಮತ್ತು ಆಗಾಗ್ಗೆ ತನ್ನ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಗಳಿಗೆ ಹೋಗುತ್ತಿದ್ದ ಕಾರಣ ತನಗೆ ಪರಿಚಯವಾಗಿದೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಏಪ್ರಿಲ್‌ನಲ್ಲಿ ತನ್ನ ಮನೆಗೆ ಬಾಲಕಿ ಕರೆಸಿಕೊಂಡ ವ್ಯಕ್ತಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಲೈಂಗಿಕ ದೌರ್ಜನ್ಯದ ಬಗ್ಗೆ ಬಾಯಿ ಬಿಡದಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾನೆ., ಜೂನ್ 27ರಂದು ಬಾಲಕಿಯ ತಂದೆಗೆ ಆರೋಪಿ ಮಗ ವಿಡಿಯೋ ಕಳುಹಿಸದೇ ಇದ್ದಿದ್ದರೆ ಈ ವಿಷಯ ಮುಚ್ಚಿ ಹೋಗುತ್ತಿತ್ತು.
ತಂದೆ ಮಾಟಮಂತ್ರ ಮಾಡುತ್ತಿದ್ದಾನೆ ಎಂದು ಶಂಕಿಸಿದ್ದರಿಂದ ತನ್ನ ತಂದೆಯನ್ನು ಚಿತ್ರೀಕರಿಸಲು ತನ್ನ ಮೊಬೈಲ್ ಕ್ಯಾಮೆರಾವನ್ನು ಹೊಂದಿಸಿದ್ದಾಗಿ ವಿಚಾರಣೆಯ ಸಮಯದಲ್ಲಿ ಮಗ ಪೊಲೀಸರಿಗೆ ತಿಳಿಸಿದ್ದಾನೆ. ಆತ ತನ್ನ ಮೊಬೈಲ್ ಕ್ಯಾಮರಾ ಆನ್ ಮಾಡಿ ತನ್ನ ತಂದೆ ಅತ್ಯಾಚಾರ ಮಾಡುವುದನ್ನು ರೆಕಾರ್ಡ್ ಮಾಡಿದ್ದಾನೆ. ತಂದೆ ಮತ್ತು ಮಗ ಇಬ್ಬರನ್ನೂ ಬಂಧಿಸಲಾಗಿದೆ.