
ಮಾರ್ಚ್ ಹದಿನಾರು ರಂದು ಸಂಜೆ ದೆಹಲಿಯ ನಾತು ಕಾಲೋನಿ ಚೌಕಿಯಲ್ಲಿ ಈ ಘಟನೆ ನಡೆದಿದ್ದು, ಕೃಷನ್ ಶೇರವಾಲ್ ಎಂಬಾತ ಕತ್ತಿ ಹಾಗೂ ಚಾಕು ಹಿಡಿದು ಅಡ್ಡಾಡಿದ್ದಾನೆ. ಇದರಿಂದ ಭಯಭೀತರಾದ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೆಲವರು ಕೂಡಲೇ ಪೊಲೀಸರಿಗೂ ಸಹ ಈ ವಿಷಯ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿಯೇ ಆರೋಪಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದ ಎನ್ನಲಾಗಿದ್ದು, ಪೊಲೀಸರು ಆತನನ್ನು ಸುತ್ತುವರೆದ ವೇಳೆ ಕತ್ತಿಯಿಂದ ತನ್ನ ಕತ್ತನ್ನು ಇರಿದುಕೊಂಡಿದ್ದಾನೆ.
ಇದರ ಪರಿಣಾಮವಾಗಿ ಆತ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ವಿರುದ್ಧ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾನೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.