alex Certify ಮದುವೆಗೆ ಒಪ್ಪದ್ದಕ್ಕೆ ಪ್ರೇಯಸಿಯ ತಂದೆಯನ್ನೇ ಕೊಂದ ಪಾಪಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಒಪ್ಪದ್ದಕ್ಕೆ ಪ್ರೇಯಸಿಯ ತಂದೆಯನ್ನೇ ಕೊಂದ ಪಾಪಿ..!

ತನ್ನ ಪ್ರಿಯತಮೆಯ ತಂದೆಯನ್ನ ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಪೊಲೀಸರು ಉತ್ತರ ದೆಹಲಿಯ ಸೋನಿಯಾ ವಿಹಾರ ಏರಿಯಾದಲ್ಲಿ 25 ವರ್ಷದ ಯುವಕನನ್ನ ಬಂಧಿಸಿದ್ದಾರೆ. ಯುವತಿಯ ತಂದೆ ಮದುವೆಗೆ ಒಪ್ಪದ ಕಾರಣ ಆರೋಪಿ ಈ ಹತ್ಯೆಗೈದಿದ್ದಾನೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಯನ್ನ ಸೂರಜ್​ ಕುಮಾರ್​ ಎಂದು ಗುರುತಿಸಲಾಗಿದೆ. ಈತ ಕೂಡ ಇದೇ ಏರಿಯಾದ ನಿವಾಸಿಯಾಗಿದ್ದು, ಪಾಲಂ ಮೆಟ್ರೋ ನಿಲ್ದಾಣದಲ್ಲಿ ಹೌಸ್​ ಕೀಪರ್​ ಆಗಿ ಕೆಲಸ ಮಾಡುತ್ತಿದ್ದ. ಕೊಲೆ ನಡೆಸಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಈತನನ್ನ ಬಂಧಿಸಿದ್ದಾರೆ.
ಕೊಲೆಯಾದ 50 ವರ್ಷದ ಬಿಜೇಂದರ್​ ಸಿಂಗ್​ ಮೃತ ದೇಹ ಶನಿವಾರ ಅವರ ಮನೆಯಲ್ಲೇ ಪತ್ತೆಯಾಗಿತ್ತು. ಮೃತದೇಹದ ಮೇಲೆ ಗಾಯದ ಕಲೆಗಳಿದ್ದವು ಅಂತಾ ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...