ನವದೆಹಲಿ: ತನ್ನ ಪ್ರೇಯಸಿಯ ಜನ್ಮದಿನದಂದು ಆಕೆಗೊಂದು ದುಬಾರಿ ಉಡುಗೊರೆ ಕೊಟ್ಟು ಖುಷಿಪಡಿಸಲು 22 ವರ್ಷದ ಮಜ್ನುವೊಬ್ಬ ಆಸೆಪಟ್ಟಿದ್ದ. ಆದರೆ ಅವನ ಜೇಬಿನಲ್ಲಿ ಪುಡಿಗಾಸು ಕೂಡ ಇರಲಿಲ್ಲ. ಯಾಕೆಂದರೆ, ಲಾಕ್‍ಡೌನ್ ಸಂದರ್ಭದಲ್ಲಿ ಅವನನ್ನು ಕಾಲ್ ಸೆಂಟರ್‍ವೊಂದರ ಕೆಲಸದಿಂದ ಕಿತ್ತುಹಾಕಲಾಗಿತ್ತು.
ಹೇಗಾದರೂ ಮಾಡಿ ಪ್ರೇಯಸಿಯನ್ನು ಖುಷಿಪಡಿಸಲು ಸಂಚು ಹೆಣೆದ ಯುವಕ, ಕೊನೆಗೆ ಆಯ್ದುಕೊಂಡಿದ್ದ ಕೈನಲ್ಲಿ ಚಾಕು ಹಿಡಿದು ಅಪರಿಚಿತರನ್ನು ಬೆದರಿಸಿ ದೋಚುವ ಹೀನ ಕೆಲಸಕ್ಕೆ. ಹೌದು, ದಿಲ್ಲಿಯ ದಾಬ್ರಿ ನಿವಾಸಿ ವಿರಾಟ್ ಸಿಂಗ್ ಇಂಥ ಕಳ್ಳತನ ನಡೆಸಿದ್ದಾನೆ.
BREAKING NEWS: ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್
ಶುಕ್ರವಾರ ತಡರಾತ್ರಿ ಸೀತಾಪುರಿ ಬಸ್‍ಸ್ಟ್ಯಾಂಡ್ ಬಳಿಯಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ, ಬೆದರಿಸಿ ಮೊಬೈಲ್, 5,500 ರೂ. ಹಣವನ್ನು ವಿರಾಟ್ ಕಳ್ಳತನ ಮಾಡಿದ್ದಾನೆ. ಈ ಸಂಬಂಧ ಪೊಲೀಸರಲ್ಲಿ ದೂರು ದಾಖಲಾಗಿ, ಪ್ರಕರಣದಲ್ಲಿ ತನಿಖೆ ಕೈಗೊಂಡಾಗ ಕಳ್ಳತನದ ಹಿಂದಿನ ಪ್ರೇಮ ಕಥೆ ಬಯಲಾಗಿದೆ.