alex Certify ವಿಶ್ವ ದಾಖಲೆಗೆ ಪಾತ್ರವಾಗಲಿದೆ 2024 ರ ಪ್ಯಾರಿಸ್ ಒಲಿಂಪಿಕ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ದಾಖಲೆಗೆ ಪಾತ್ರವಾಗಲಿದೆ 2024 ರ ಪ್ಯಾರಿಸ್ ಒಲಿಂಪಿಕ್ಸ್….!

ಪ್ಯಾರಿಸ್: 2020ರ ಟೋಕಿಯೋ ಒಲಿಂಪಿಕ್ಸ್ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇನ್ನು ಮುಂದಿನ 2024ರ ಒಲಿಂಪಿಕ್ಸ್ ಗಾಗಿ ಈಗಾಗಲೇ ಪ್ಯಾರಿಸ್ ತಮ್ಮ ಭವ್ಯ ಯೋಜನೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದು ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ.

ಟೋಕಿಯೊದಿಂದ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಗೆ ಒಲಿಂಪಿಕ್ಸ್ ಹಸ್ತಾಂತರದ ಭಾಗವಾಗಿ, ಐಫೆಲ್ ಟವರ್ ನಿಂದ ಬೃಹತ್ ಧ್ವಜವನ್ನು ಬಿಡುಗಡೆ ಮಾಡುವುದಾಗಿ ಪ್ಯಾರಿಸ್ -2024 ಒಲಿಂಪಿಕ್ಸ್ ಸಂಘಟನಾ ಸಮಿತಿ ತಿಳಿಸಿದೆ. ಒಲಿಂಪಿಕ್ ಧ್ವಜದ ಸಾಂಪ್ರದಾಯಿಕ ಹಸ್ತಾಂತರವು ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ನಡೆಯುತ್ತದೆ.

BIG NEWS: ಸಿಎಂ ಬೊಮ್ಮಾಯಿ ವಿರುದ್ಧ ಸಿಡಿದೆದ್ದ ಶಾಸಕ ಪ್ರೀತಂ ಗೌಡ

ಒಲಿಂಪಿಕ್ಸ್ ನಲ್ಲಿ ಇದುವರೆಗೆ ಹಾರಿಸಲಾಗಿರುವುದಕ್ಕಿಂತ ಅತಿದೊಡ್ಡ ಧ್ವಜವನ್ನು ಪ್ಯಾರಿಸ್ ನಲ್ಲಿ ಹಾರಿಸಲಾಗುವುದು ಎಂದು ಪ್ಯಾರಿಸ್ ಸಂಘಟನಾ ಸಮಿತಿಯ ಅಧ್ಯಕ್ಷ ಟೋನಿ ಎಸ್ಟಂಗುಯೆಟ್ ಹೇಳಿದರು. ಆಗಸ್ಟ್ 8 ರಂದು ‘ವಿಶ್ವದ ಅತಿದೊಡ್ಡ ಧ್ವಜ’ ಅಂತಾ ಏಕೆ ಕರೆಯಲಾಗುವುದು ಎಂಬುದನ್ನು ಬಹಿರಂಗಪಡಿಸಲಾಗುತ್ತದೆ ಎಂದಿದ್ದಾರೆ.

‘’ಇದು ಹೆಚ್ಚು ಕಡಿಮೆ ಫುಟ್ಬಾಲ್ ಮೈದಾನಕ್ಕೆ ಸಮನಾಗಿದೆ. ಹಾಗಾಗಿ ಅದು ದೊಡ್ಡದಾಗಿರುತ್ತದೆ ನಿಜ. ಇದು ಪ್ಯಾರಿಸ್ 2024ರ ಮೊದಲ ವಿಶ್ವ ದಾಖಲೆಯಾಗಲಿದೆ. ಏಕೆಂದರೆ ಇದುವರೆಗೆ ಹಾರಿಸಲ್ಪಟ್ಟ ಧ್ಜಜಕ್ಕಿಂತ ದೊಡ್ಡದಾಗಿದೆ. ಐಫೆಲ್ ಟವರ್‌ನೊಂದಿಗೆ ವಿಶ್ವದ ಅತ್ಯಂತ ಸುಂದರವಾದ ಧ್ವಜವನ್ನು ಹೊಂದಿರುವ ಅದೃಷ್ಟವನ್ನು ನಾವು ಹೊಂದಿದ್ದೇವೆ. ಆದ್ದರಿಂದ ನಮ್ಮ ಸವಾಲು ಈ ಧ್ವಜವನ್ನು ಎತ್ತುವುದು ಹಾಗೂ ಪ್ಯಾರಿಸ್‌ನ ಐಫೆಲ್ ಟವರ್ ಮೇಲೆ ಈ ಧ್ವಜ ಹಾರಿಸುವುದು” ಎಂದು ಅವರು ಹೇಳಿದರು.

ಇನ್ನು ಪ್ಯಾರಿಸ್ 100 ವರ್ಷಗಳ ನಂತರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...