ದೆಹಲಿ ಬಿರುಬಿಸಿಲಿನಿಂದ ಕುದಿಯುತ್ತಿದೆ. ಒಂದೆಡೆ ಲೋಕಸಭೆ ಚುನಾವಣಾ ಫಲಿತಾಂಶ ಕಾವೇರಿದ್ದರೆ, ರಾಷ್ರ್ಪ ರಾಜಧಾನಿಯಲ್ಲಿನ ತಾಪಮಾನ ತಣ್ಣೀರನ್ನೂ ಕುದಿಸುತ್ತಿದೆ. ಈಗಾಗಲೇ ದೆಹಲಿ 52 ಡಿಗ್ರಿ ಸೆಲ್ಸಿಯಸ್ ತಾಪಮಾನ ತಲುಪಿದ್ದು ಬಿಸಿಗಾಳಿಯಿಂದ ಜನರ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ. ತಾಪಮಾನವು 60 ಡಿಗ್ರಿ ಸೆಲ್ಸಿಯಸ್ ದಾಟಿದರೆ ಬದುಕುವುದು ಕಷ್ಟವೆಂದು ಹೇಳಲಾಗುತ್ತಿದೆ. ಇಷ್ಟು ಗರಿಷ್ಠ ತಾಪಮಾನದ ನಡುವೆ ಡ್ರಮ್ ನಲ್ಲಿರುವ ನೀರು ಬೆಂಕಿಯಿಲ್ಲದೇ ಕುದಿಯುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಛಾವಣಿಯ ಮೇಲಿರುವ ಟ್ಯಾಂಕ್ ನೀರು ಕುದಿಯುತ್ತಿದೆ. ನೀರನ್ನು ಬಿಸಿ ಮಾಡಿದಾಗ ಕುದಿಯುವಂತೆ ಟ್ಯಾಂಕ್ ನೀರು ಕುದಿಯುತ್ತಿದೆ. ಈ ನೀರಿನಿಂದ ಸ್ನಾನ ಮಾಡಿದರೆ ಅಥವಾ ಶೌಚಾಲಯದ ಉದ್ದೇಶಗಳಿಗಾಗಿ ಬಳಸಿದರೆ ಏನಾಗುತ್ತದೆ ಎಂದು ವಿಡಿಯೋ ರೆಕಾರ್ಡ್ ಮಾಡಿರುವವರು ಪ್ರಶ್ನಿಸಿದ್ದು ಟ್ಯಾಂಕರ್ ನಲ್ಲಿರುವ ನೀರು ಸಹ ಕುದಿಯುತ್ತಿದ್ದು ದೆಹಲಿ ಬಿಸಿಲಿನಿಂದ ಸುಟ್ಟುಹೋಗ್ತಿದೆ ಎಂಬುದನ್ನ ಹೇಳಿದ್ದಾರೆ.
ಆದರೆ ತಾಪಮಾನವು 60 ಡಿಗ್ರಿ ಸೆಲ್ಸಿಯಸ್ ದಾಟಿದರೆ ಯಾವುದೇ ಜೀವ ಬದುಕಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಿರುವಾಗ 50 ಡಿಗ್ರಿ ತಾಪಮಾನದಲ್ಲಿ ನೀರು ಕುದಿಯುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕೆಂದರೆ ನೀರು 100 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಕುದಿಯುವುದರಿಂದ ವೀಡಿಯೊ ವಿಜ್ಞಾನದ ನಿಯಮಗಳನ್ನು ಸವಾಲು ಮಾಡುತ್ತಿವೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದು, . ನೀರಿನ ಟ್ಯಾಂಕ್ ಕೇವಲ 50 ಡಿಗ್ರಿ ಶಾಖದಲ್ಲಿ ಈ ರೀತಿ ಕುದಿಯುವುದಿಲ್ಲ. ವಿಡಿಯೋ ಪೋಸ್ಟ್ ಮಾಡುವ ಮೊದಲು ನಿಮ್ಮ ಸ್ವಂತ ಬುದ್ಧಿವಂತಿಕೆಯನ್ನು ಬಳಸಿ. ನೀರು 100 ಡಿಗ್ರಿಯಲ್ಲಿ ಕುದಿಯುತ್ತದೆ ಮತ್ತು ಈ ರೀತಿ 50 ಡಿಗ್ರಿಗೆ ಕುದಿಯಲು ಪ್ರಾರಂಭಿಸಿದರೆ, ಅಂತಹ ಶಾಖದಿಂದಾಗಿ ಈ ಪಾಲಿಮರ್ ಟ್ಯಾಂಕ್‌ಗಳು ಮೊದಲು ಆಕಾರವನ್ನು ಕಳೆದುಕೊಳ್ಳುತ್ತವೆ ಎಂದಿದ್ದಾರೆ.