ಬುಧವಾರ ನಡೆದ ವಿಚಾರಣೆ ವೇಳೆ ವಕೀಲರೊಬ್ಬರು ಪದೇ ಪದೇ ‘ಸರ್’ ಎಂದು ಸಂಬೋಧಿಸುತ್ತಿರುವುದಕ್ಕೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರೇಖಾ ಪಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿದ್ದರು, ಈ ವೇಳೆ ವಾದ ಮಂಡಿಸುತ್ತಿದ್ದ ವಕೀಲರು ಎದುರಿಗೆ ಕುಳಿತಿರುವುದು ಮಹಿಳಾ ಜಡ್ಜ್ ಎಂದು ತಿಳಿದಿದ್ದರು ಸರ್ ಎಂದು ಸಂಭೋಧಿಸುತ್ತಿದ್ದರು.
ಇದರಿಂದ ಅಸಮಾಧಾನಗೊಂಡ ನ್ಯಾಯಾಮೂರ್ತಿ ರೇಖಾ ಪಲ್ಲಿಯವರು, ನಿಮ್ಮ ಎದುರಿಗೆ ಕುಳಿತಿರುವ ನಾನು ಸರ್ ಅಲ್ಲಾ. ನಿಮಗೆ ಅರ್ಥವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ವಕೀಲರು ಕ್ಷಮೆ ಯಾಚಿಸಿ, ನೀವು ಕುಳಿತಿರುವ ಕುರ್ಚಿಯಿಂದಾಗಿ ನಾನು ನಿಮ್ಮನ್ನು ಸರ್ ಎಂದು ಸಂಬೋಧಿಸಿದೆ ಎಂದಿದ್ದಾರೆ.
ನಾನು ಪಕ್ಷದ ಬಾಡಿಗೆದಾರನಲ್ಲ, ಪಾಲುದಾರ, ಕಾಂಗ್ರೆಸ್ ನಾಯಕರಿಗೆ ಮನೀಶ್ ತಿವಾರಿ ಟಾಂಗ್
ವಕೀಲರ ಉದ್ಧಟತನದ ಉತ್ತರ ಕೇಳಿದ ನ್ಯಾಯಮೂರ್ತಿ ರೇಖಾ ಪಲ್ಲಿಯವರು, ಈ ಕುರ್ಚಿ ಕೇವಲ ‘ಸರ್’ಗಾಗಿ ಅಲ್ಲಾ ಎಂದಿದ್ದಾರೆ. ಈ ಕಾಲದಲ್ಲೂ ನೀವು ಈ ಕುರ್ಚಿ ಸರ್ ಗಳಿಗೆ ಅಂದರೆ ಪುರುಷರಿಗೆ ಎಂದು ಭಾವಿಸುತ್ತಿರುವುದು ವಿಷಾದಕರ. ನಿಮ್ಮಂತ ಯುವಕರೇ ಇಂತಾ ವ್ಯತ್ಯಾಸ ಮಾಡಿದರೆ ಭವಿಷ್ಯದಲ್ಲಿ ನಮಗೆ ಭರವಸೆ ಏನು ಎಂದು ಪ್ರಶ್ನಿಸಿದ್ದಾರೆ. ಈ ಘಟನೆ ಈಗ ಹಲವು ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಳೆದ ವರ್ಷ ನ್ಯಾಯಾಲಯಗಳಿಗೆ ಹೆಚ್ಚಿನ ಮಹಿಳಾ ನ್ಯಾಯಾಧೀಶರನ್ನು ನೇಮಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನ ಮಹಿಳಾ ವಕೀಲರ ಸಂಘ ಸಲ್ಲಿಸಿತ್ತು. ಮಣಿಪುರ, ಮೇಘಾಲಯ, ಪಾಟ್ನಾ, ತ್ರಿಪುರಾ ಮತ್ತು ಉತ್ತರಾಖಂಡದಲ್ಲಿ ಒಬ್ಬ ಮಹಿಳಾ ನ್ಯಾಯಧೀಶರೂ ಇಲ್ಲ ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ. ಅದೇ ಸಮಯದಲ್ಲಿ ಗುವಾಹಟಿ, ಹಿಮಾಚಲ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಒಡಿಶಾ, ರಾಜಸ್ಥಾನ ಮತ್ತು ಸಿಕ್ಕಿಂಗಳಲ್ಲಿ ಒಬ್ಬರೇ ಮಹಿಳಾ ನ್ಯಾಯಾಧೀಶರು ಇದ್ದಾರೆ ಎಂಬುದನ್ನ ಉಲ್ಲೇಖಿಸಲಾಗಿದೆ.