ಕೊರೊನಾ ನಿಯಂತ್ರಣಕ್ಕೆ ಲಾಕ್ ಆಗಿದ್ದ ದೆಹಲಿ ಈಗ ಅನ್ಲಾಕ್ ಆಗಿದೆ. ಆದ್ರೆ ಜನಸಂದಣಿ ತಪ್ಪಿಸಲು ಕೇಜ್ರಿವಾಲ್ ಸರ್ಕಾರ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ. ಮದ್ಯದಂಗಡಿ ಮುಂದೆ ಜನರ ದಟ್ಟಣೆ ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜನರು ಭಾರತೀಯ ಹಾಗೂ ವಿದೇಶಿ ಬ್ರಾಂಡ್ ಮಧ್ಯವನ್ನು ಮನೆಯಲ್ಲೇ ಕುಳಿತು ಆರ್ಡರ್ ಮಾಡಬಹುದಾಗಿದೆ.
ಜನರು ಮೊಬೈಲ್ ಅಪ್ಲಿಕಷನ್ ಹಾಗೂ ಪೋರ್ಟಲ್ ಮೂಲಕ ಆಲ್ಕೋಹಾಲ್ ಆರ್ಡರ್ ಮಾಡಬಹುದಾಗಿದೆ. ದೆಹಲಿ ಸರ್ಕಾರ ಮದ್ಯ ವಿತರಣೆಗೆ ಅಬಕಾರಿ ನಿಯಮಗಳನ್ನು ಬದಲಾಯಿಸಿದೆ. ದೆಹಲಿ ಅಬಕಾರಿ ನಿಯಮಗಳು, 2021 ರ ಪ್ರಕಾರ, ಎಲ್ -13 ಪರವಾನಗಿ ಹೊಂದಿರುವವರಿಗೆ ಜನರ ಮನೆಗಳಿಗೆ ಮದ್ಯ ತಲುಪಿಸಲು ಅವಕಾಶವಿರುತ್ತದೆ. ಮೊಬೈಲ್ ಅಪ್ಲಿಕೇಶನ್ ಅಥವಾ ಆನ್ಲೈನ್ ವೆಬ್ ಪೋರ್ಟಲ್ ಮೂಲಕ ಭಾರತೀಯ ಮತ್ತು ವಿದೇಶಿ ಮದ್ಯವನ್ನು ಮನೆ ಮನೆಗೆ ವಿತರಿಸಬಹುದು.
ಮದ್ಯ ತಯಾರಕರು, ಆನ್ಲೈನ್ ಆದೇಶ ಮತ್ತು ಮನೆಗೆ ಮದ್ಯ ವಿತರಣೆ ಮಾಡಲು ದೆಹಲಿ ಸರ್ಕಾರದಿಂದ ಅನುಮತಿ ಕೋರಿದ್ದರು. ಕೊರೊನಾ ನಿಯಂತ್ರಿಸಲು ದೆಹಲಿಯಲ್ಲಿ ಲಾಕ್ಡೌನ್ ಘೋಷಣೆಯ ನಂತರ, ಮದ್ಯದಂಗಡಿ ಮುಂದೆ ದೊಡ್ಡ ಸಾಲುಗಳಿದ್ದವು.