ರಾಷ್ಟ್ರೀಯ ಹಸಿರು ಪ್ರಾಧಿಕಾರದ (ಎನ್‌ಜಿಟಿ) ನಿರ್ದೇಶನದ ಅನುಸಾರ, ಜನವರಿ 1, 2022ರಂದು ಹತ್ತು ವರ್ಷ ಪೂರೈಸಿದ ಎಲ್ಲಾ ಡೀಸೆಲ್ ಚಾಲಿತ ವಾಹನಗಳ ನೋಂದಣಿಯನ್ನು ವಜಾಗೊಳಿಸಿ, ಎನ್‌ಓಸಿ ಪ್ರಮಾಣಪತ್ರಗಳನ್ನು ನೀಡಲಿದೆ. ಈ ಮೂಲಕ ಹಳೆಯ ವಾಹನಗಳನ್ನು ಬೇರೆ ಜಾಗಗಳಲ್ಲಿ ಮರುನೋಂದಣಿ ಮಾಡಬಹುದಾಗಿದೆ.
ಇದೇ ವೇಳೆ, 15 ವರ್ಷ ಪೂರೈಸಿದ ಡೀಸೆಲ್ ವಾಹನಗಳಿಗೆ ಎನ್‌ಓಸಿ ನೀಡಲು ಬರುವುದಿಲ್ಲ.
ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿರುವ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳು ಹಾಗೂ 15 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನಗಳ ನೋಂದಣಿ ಮೇಲಿನ ನಿರ್ಬಂಧಗಳ ಸಂಬಂಧ ಎನ್‌ಜಿಟಿ ನಿರ್ದೇಶನಗಳನ್ನು ಹೊರಡಿಸಿದೆ. 10 ವರ್ಷದ ಮೇಲ್ಪಟ್ಟ ಡೀಸೆಲ್ ವಾಹನಗಳ ಅಪನೋಂದಣಿ ಕಾರ್ಯವನ್ನು ಸಮರ್ಪಕವಾಗಿ ನಡೆಸಿಕೊಡಬೇಕೆಂದು 2016ರ ಆದೇಶವೊಂದರಲ್ಲಿ ಎನ್‌ಜಿಟಿ ಆದೇಶಿಸಿತ್ತು.
ದುಡುಕಿನ ನಿರ್ಧಾರ ಕೈಗೊಂಡ ಇಂಜಿನಿಯರ್; ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ
ಮೊದಲ ಹಂತದಲ್ಲಿ, 15 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳ ಅಪನೋಂದಣಿಯನ್ನು ಕೈಗೆತ್ತಿಕೊಳ್ಳಬೇಕಿತ್ತು.