ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಕಲ ಸಾರ್ವಜನಿಕ ಸೇವೆಗಳನ್ನು ಆನ್ಲೈನ್ ಮಾಡಲು ಹೊರಟಿರುವ ಅರವಿಂದ್ ಕೇಜ್ರಿವಾಲ್‌ರ ದೆಹಲಿ ಸರ್ಕಾರವು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಲ್ಲಿ ಪ್ರಾದೇಶೀಕ ಸಾರಿಗೆ ಕಚೇರಿಯ (ಆರ್‌ಟಿಓ) 33 ಸೇವೆಗಳನ್ನು ಆನ್ಲೈನ್ ಮಾಡಿದೆ.
ಈ 33 ಸೇವೆಗಳ ಮೂಲಕ ಸಾರಿಗೆ ಇಲಾಖೆಗೆ ಬರುವ 95% ಸಾರ್ವಜನಿಕ ಅರ್ಜಿಗಳ ವಿಲೇವಾರಿ ಮಾಡಬಹುದಾಗಿದ್ದು, ದೆಹಲಿ ವಾಸಿಗಳು ಉದ್ದುದ್ದ ಸರತಿಯಲ್ಲಿ ನಿಲ್ಲಬೇಕಾದ ಅಗತ್ಯ ಇನ್ನು ಮುಂದೆ ಇರುವುದಿಲ್ಲ. ದೆಹಲಿ ಸರ್ಕಾರದ ಎಲ್ಲಾ ಇಲಾಖೆಗಳನ್ನು ಆನ್ಲೈನ್ ಮಾಡುವ ಮೂಲಕ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಅಗತ್ಯವನ್ನು ಕಿತ್ತೊಗೆಯಲು ನೋಡುತ್ತಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಡೀರ್ ಏರಿಕೆ; ಒಂದೇ ದಿನದಲ್ಲಿ 490 ಜನರು ಮಹಾಮಾರಿಗೆ ಬಲಿ
ಮುಖರಹಿತ ವಹಿವಾಟಿನ ಟ್ರಯಲ್ ಹಂತದಲ್ಲೇ ಐದು ತಿಂಗಳೊಳಗೆ 3.5 ಲಕ್ಷ ಅರ್ಜಿಗಳ ಕೋರಿಕೆಯನ್ನು ಈಡೇರಿಸಲಾಗಿದೆ ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ತಿಳಿಸಿದ್ದಾರೆ.