16 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿನ ನಿರ್ಬಂಧಗಳಿಂದಾಗಿ ರಾಜಧಾನಿಯಿಂದ ಓಡಿಹೋದ 18 ದಿನಗಳ ನಂತರ ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ.
ಮಾರ್ಚ್ 19 ರಂದು ಅಪ್ರಾಪ್ತ ಬಾಲಕಿಯೊಬ್ಬಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಲಾಗಿತ್ತು. ಕಾಳಿಂದಿ ಕುಂಜ್ ಪೊಲೀಸ್ ಠಾಣೆಯ ಅಧಿಕಾರಿಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 (ಅಪಹರಣಕ್ಕೆ ಶಿಕ್ಷೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು.
BIG NEWS: ಭಾರತದಲ್ಲಿ XE ರೂಪಾಂತರಿ ವೈರಸ್ ಪತ್ತೆ; 60 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢ
ಆಕೆಯ ಪತ್ತೆಗೆ ರಚಿಸಲಾದ ಪೊಲೀಸ್ ತಂಡ, ಕಾಣೆಯಾದ ಅಪ್ರಾಪ್ತೆ ಬಗ್ಗೆ ಲಭ್ಯವಿರುವ ಗರಿಷ್ಠ ಮಾಹಿತಿಯನ್ನು ತಮ್ಮ ನೆಟ್ ವರ್ಕ್‌ನಲ್ಲಿ ಹಂಚಿಕೊಂಡಿತ್ತು. ಹಾಗೆಯೇ ನಾಪತ್ತೆಯಾಗಿರುವಾಕೆಯನ್ನು ಪತ್ತೆ ಹಚ್ಚಲು ಸುತ್ತಮುತ್ತಲ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಇಶಾ ಪಾಂಡೆ ತಿಳಿಸಿದ್ದಾರೆ.
ಅಂತಿಮವಾಗಿ, ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಆಕೆಯನ್ನು ಪತ್ತೆಹಚ್ಚಿ ತನಿಖಾಧಿಕಾರಿಗೆ ಒಪ್ಪಿಸಲಾಯಿತು. ವಿಚಾರಣೆ ನಡೆಸಿದಾಗ, ಅಪ್ರಾಪ್ತ ಬಾಲಕಿ ಮನೆಯಲ್ಲಿನ ನಿರ್ಬಂಧಗಳಿಂದಾಗಿ ಓಡಿಹೋಗಿದ್ದಾಗಿ ಹೇಳಿದ್ದಾಳೆ.