ಕೊರೊನಾ ಮೂರನೆ ಅಲೆಯು ಬಂದೆರಗುವ ಭಯದ ನಡುವೆಯೇ ದೆಹಲಿ ಸರ್ಕಾರವು ಹಬ್ಬದ ನಿಮಿತ್ತ ಯಾವುದೇ ಜಾತ್ರೆ ಹಾಗೂ ತಿಂಡಿಗಳ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ನೀಡುವುದಿಲ್ಲ ಎಂದು ಖಡಾಖಂಡಿತವಾಗಿದೆ ಹೇಳಿದೆ.
ಮುಂಬರುವ ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿರಿಸಿ ಡಿಡಿಎಂಎ ಹೊಸ ಕೋವಿಡ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಯ ಪ್ರಕಾರ ದೆಹಲಿಯಲ್ಲಿ ಹಬ್ಬದ ಸಂದರ್ಭದಲ್ಲಿ ಫುಡ್ ಸ್ಟಾಲ್ಗಳನ್ನು ಇಡುವುದಕ್ಕೂ ನಿರ್ಬಂಧ ಹೇರಲಾಗಿದೆ.
ಇದು ಮಾತ್ರವಲ್ಲದೇ ಹಬ್ಬದ ಪ್ರಯುಕ್ತ ಒಂದೆಡೆ ಜನ ನಿಲ್ಲುವುದು ಅಥವಾ ನೃತ್ಯದ ಮೂಲಕ ಸಂಭ್ರಮಿಸುವುದಕ್ಕೆ ಅವಕಾಶ ಇರುವುದಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಖುರ್ಚಿಯ ಮೇಲೆ ಕುಳಿತುಕೊಳ್ಳಬಹುದು ಎಂದು ಹೇಳಲಾಗಿದೆ.
ಇದು ಮಾತ್ರವಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನದಿಯ ದಡಗಳಲ್ಲಿ ಛಠ್ ಪೂಜೆಯನ್ನು ಮಾಡುವುದನ್ನೂ ನಿರ್ಬಂಧಿಸಲಾಗಿದೆ.
ದೆಹಲಿಯಲ್ಲಿ ಬುಧವಾರ ಹೊಸದಾಗಿ 41 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ಪಾಸಿಟಿವಿಟಿ ದರವು 0.06 ಪ್ರತಿಶತವಾಗಿದೆ. ಕಳೆದ 24 ಗಂಟೆಗಳಲ್ಲಿ 22 ಮಂದಿ ಗುಣಮುಖರಾಗಿದ್ದಾರೆ ಹಾಗೂ ಯಾವುದೇ ಕೊರೊನಾ ಸಾವು ಸಂಭವಿಸಿಲ್ಲ.