
ದೇಶದ ರಾಜಧಾನಿಯ ಬಿಯರ್ ಪ್ರಿಯರಿಗೆ ಭಾರೀ ಬರಗಾಲ ಸೃಷ್ಟಿಯಾಗಿದೆ. ಪ್ರಖ್ಯಾತ ಬ್ರಾಂಡ್‌ಗಳ ಬಿಯರ್ ಬಾಟಲಿಗಳು ಬಾರುಗಳಿಂದ ನಾಪತ್ತೆಯಾಗಿದ್ದು, ಮದ್ಯ ಪ್ರಿಯರು ತಮ್ಮ ಮೆಚ್ಚಿನ ಬ್ರಾಂಡ್‌ಗಳು ಸಿಗದೇ ಹತಾರಾಗಿದ್ದಾರೆ.
ಸರ್ಕಾರೀ ಚಾಲಿತ ಮದ್ಯದಂಗಡಿಗಳಲ್ಲಿ ಫ್ರಿಡ್ಜ್‌ಗಳು ಇಲ್ಲದ ಕಾರಣ ತಮ್ಮ ಮೆಚ್ಚಿನ ಚಿಲ್ಡ್ ಬಿಯರ್‌ನ ಪಿಂಟ್ ಅಥವಾ ಕ್ಯಾನ್‌ಗಳು ಜನರಿಗೆ ಸಿಗದಂತೆ ಆಗಿದೆ. ಭಾರೀ ಬೇಸಿಗೆಯ ಕಾರಣ ತಂಪಾದ ಬಿಯರ್‌ಗೆ ಭಾರೀ ಬೇಡಿಕೆ ಇರುವ ಕಾರಣ ಇದಕ್ಕೆ ತಕ್ಕಂತೆ ಪೂರೈಕೆ ಮಾಡಲು ಮದ್ಯದಂಗಡಿಗಳಿಗೆ ಸಾಧ್ಯವಾಗುತ್ತಿಲ್ಲ.
ಸಾಮಾನ್ಯವಾಗಿ ದೆಹಲಿಯಲ್ಲಿ 32 ಕೋಟಿಯಷ್ಟು ಬಿಯರ್ ಕೇಸುಗಳು ವರ್ಷವೊಂದರಲ್ಲಿ ಮಾರಾಟವಾಗುತ್ತವೆ. ಇದರಲ್ಲಿ 40%ನಷ್ಟು ಬೇಸಿಗೆ ಕಾಲದಲ್ಲಿ ಖಾಲಿಯಾಗುತ್ತವೆ. ದೆಹಲಿಯಾದ್ಯಂತ 573 ಸರ್ಕಾರೀ ಚಾಲಿತ ಮದ್ಯದಂಗಡಿಗಳಿವೆ.