ಆಂಧ್ರಪ್ರದೇಶದ ಏಲೂರಿನಲ್ಲಿ ನಿಗೂಢ ಕಾಯಿಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಅನಾರೋಗ್ಯದ ಬಗ್ಗೆ ತನಿಖೆ ನಡೆಸುವ ಸಲುವಾಗಿ ಸರ್ಕಾರ ದೆಹಲಿಯಿಂದ ವೈದ್ಯಕೀಯ ತಜ್ಞರ ತಂಡವನ್ನೇ ಏಲೂರಿಗೆ ಕಳಿಸುತ್ತಿದೆ.
ಶನಿವಾರ ಏಲೂರಿನಲ್ಲಿ ಈ ನಿಗೂಢ ಕಾಯಿಲೆ ಕಾಣಿಸಿಕೊಂಡಿದ್ದು, ಅಸ್ವಸ್ಥರು ವಾಕರಿಕೆ ಹಾಗೂ ಅಪಸ್ಮಾರದಿಂದ ಬಳಲಿದ್ದಾರೆ. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಸಾವನ್ನಪ್ಪಿದ್ದ.
ಈಗಾಗಲೇ ಈ ಊರಿನ ನೀರು ಹಾಗೂ ಹಾಲಿನ ಮಾದರಿಗಳನ್ನ ಪರೀಕ್ಷಿಸಲಾಗಿದ್ದು, ಯಾವುದೇ ದೋಷ ಕಂಡು ಬಂದಿಲ್ಲ. ಆದರೆ ಅಸ್ವಸ್ಥರ ರಕ್ತದ ಮಾದರಿಯಲ್ಲಿ ಸೀಸ ಹಾಗೂ ನಿಕ್ಕಲ್ ಅಂಶ ಕಂಡು ಬಂದಿರೋದು ಭಾರೀ ಚರ್ಚೆ ಗ್ರಾಸವಾಗಿದೆ.