ನವದೆಹಲಿ : ದೆಹಲಿಯಲ್ಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಆಪ್ ಸಂಸದ ಸಂಜಯ್ ಸಿಂಗ್ ನನ್ನು ಬಂಧಿಸಿದ್ದಾರೆ.
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ತಂಡ ಬುಧವಾರ ಶೋಧ ನಡೆಸಿತ್ತು. 11 ಗಂಟೆಗಳ ಪರಿಶೀಲನೆ ಬಳಿಕ ಇಡಿ ಅಧಿಕಾರಿಗಳು ಆಪ್ ಸಂಸದ ಸಂಜಯ್ ಸಿಂಗ್ ನನ್ನು ಬಂಧಿಸಿದ್ದಾರೆ.ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರ ಲಂಚವನ್ನು ಪಡೆದಿದೆ. ಹಣ ಪಾವತಿಸಿದ ಕೆಲವು ಡೀಲರ್ಗಳಿಗೆ ಅದ್ಯತೆ ನೀಡಿದೆ ಎಂದು ಆರೋಪಿಸಲಾಗಿದೆ.
ದೆಹಲಿಯ ಸಂಜಯ್ ಸಿಂಗ್ ಅವರ ನಿವಾಸದಲ್ಲಿ ಶೋಧ ನಡೆಸಿತ್ತು. ಇಡಿ ದಾಳಿಯ ಬಗ್ಗೆ ಮಾತನಾಡಿದ್ದ ಎಎಪಿ ವಕ್ತಾರೆ ರೀನಾ ಗುಪ್ತಾ, “ಸಂಜಯ್ ಸಿಂಗ್ ಅವರು ಅದಾನಿ ವಿಷಯ ಮತ್ತು ಅವರ ಕಂಪನಿಯಲ್ಲಿ ಹೂಡಿಕೆ ಮಾಡಿದ ಕಪ್ಪು ಹಣದ ಬಗ್ಗೆ ಧ್ವನಿ ಎತ್ತಿದ ಪರಿಣಾಮವಾಗಿ ಇಡಿ ದಾಳಿ ನಡೆದಿದೆ ಎಂದಿದ್ದರು.