ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪ ಸಂಭವಿಸಿದ್ದು, ಕೆಲ ಕ್ಷಣ ಭೂಮಿ ನಡುಗಿದ ಅನುಭವವಾಗಿದೆ. ಕೆಲವು ಮೆಟ್ರೋ ಸೇವೆ ಸ್ಥಗಿತಗೊಂಡಿವೆ ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ದೆಹಲಿ ಮೆಟ್ರೋ ರೈಲು ನಿಗಮದ(ಡಿಎಂಆರ್ಸಿ) ಪ್ರಕಾರ, ಬೆಳಿಗ್ಗೆ 6.42 ರ ಸುಮಾರಿಗೆ ಸ್ವಲ್ಪ ನಡುಕ ಉಂಟಾಗಿರುವುದು ದೃಢಟ್ಟಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಯಾವುದೇ ಸಾವು, ನೋವಿನ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಈ ಕಾರಣದಿಂದಾಗಿ ರೈಲುಗಳನ್ನು ಎಚ್ಚರಿಕೆಯ ವೇಗದಲ್ಲಿ ಓಡಿಸಲಾಯಿತು. ಮುಂದಿನ ಪ್ಲಾಟ್ಫಾರ್ಮ್ನಲ್ಲಿ ನಿಲ್ಲಿಸಲಾಯಿತು. ಸೇವೆಗಳು ಈಗ ಸಾಮಾನ್ಯವಾಗಿ ಚಾಲನೆಯಲ್ಲಿವೆ ಎಂದು ಡಿ.ಎಂ.ಆರ್.ಸಿ. ತಿಳಿಸಿದೆ.