
ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸದ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಮೇಲೆ, ದೆಹಲಿ ನ್ಯಾಯಾಲಯವು 10,000 ರೂಪಾಯಿ ದಂಡ ವಿಧಿಸಿದೆ. ದಂಡ ವಿಧಿಸಿದ ಕೋರ್ಟ್, ತನಿಖಾ ಸಂಸ್ಥೆಯು ನ್ಯಾಯಾಲಯ ಕೇಳಿದ್ದಕ್ಕೆ ಉತ್ತರಿಸಲು ತೆಗೆದುಕೊಂಡ ಕ್ರಮಗಳು ನಿರಾಶಾದಾಯಕ ಮತ್ತು ಅವಹೇಳನಕಾರಿ ಎಂದು ಹೇಳಿದೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗೆ ವಂಚಿಸಿದ ಆರೋಪದ ಮೇಲೆ M/s ಆಲ್ಪೈನ್ ರಿಯಲ್‌ಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರ ವಿರುದ್ಧ ಸಿಬಿಐ, ಪ್ರಕರಣ ದಾಖಲಿಸಿತ್ತು. ಮಂಜೂರಾತಿ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸದೆ ಸಾಲಗಾರರಿಗೆ ಅನಪೇಕ್ಷಿತ ಅನುಕೂಲವನ್ನು ನೀಡುವಲ್ಲಿ, ಬ್ಯಾಂಕ್ ಅಧಿಕಾರಿಗಳ ಪಾತ್ರವೂ ಇದೆ ಎಂದು ಸಿಬಿಐ ಬಹಿರಂಗಪಡಿಸಿ, ಅವರ ವಿರುದ್ಧ ಚಾರ್ಜ್ ಶೀಟ್ ಸಹ ಸಲ್ಲಿಸಿದೆ.
ಯುದ್ದ ಪೀಡಿತ ಉಕ್ರೇನ್ ನಿಂದ ವಿದ್ಯಾರ್ಥಿಗಳ ಸ್ಥಳಾಂತರ; ಕೇಂದ್ರ ಸರ್ಕಾರದ ನಡೆಗೆ ʼಸುಪ್ರೀಂʼ ಶ್ಲಾಘನೆ
ಹೀಗಾಗಿ ಬ್ಯಾಂಕಿನ 23 ಅಧಿಕಾರಿಗಳ ವಿರುದ್ಧ ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್ ಅನ್ನು ಗಮನಕ್ಕೆ ತೆಗೆದುಕೊಳ್ಳಬೇಕೆಂದು, ಜನವರಿ 22ರಂದು ತನಿಖಾ ದಳ ನ್ಯಾಯಲಯದ ಬಳಿ ಮನವಿ ಮಾಡಿಕೊಂಡಿತ್ತು. ಆದರೆ ಆರೋಪಪಟ್ಟಿಯಲ್ಲಿ ಆರೋಪಿಗಳ ಹೆಸರನ್ನು ಭ್ರಷ್ಟಾಚಾರದ ಕಾಯ್ದೆಯಡಿ ಬರುವ ಶಿಕ್ಷಾರ್ಹ ಅಪರಾಧಗಳಿಗೆ ಹೆಸರಿಸಲಾಗಿಲ್ಲ. ಭ್ರಷ್ಟಾಚಾರ ತಡೆ ಕಾಯ್ದೆಯಡಿ, ಯಾವುದೇ ಅಪರಾಧವಿಲ್ಲದೇ ಕೇವಲ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧಗಳನ್ನು ಹೇಗೆ ಅರಿಯಲು ಸಾಧ್ಯ ಎಂದು ನ್ಯಾಯಾಲಯ ಸಿಬಿಐ ಬಳಿ ಪ್ರಶ್ನಿಸಿತ್ತು.
ಈ ಬಗ್ಗೆ ಉತ್ತರಿಸಲು ತನಿಖಾಧಿಕಾರಿಯು ಹೆಚ್ಚಿನ ಸಮಯ ಕೇಳಿದ ನಂತರ ನ್ಯಾಯಾಲಯ ಸಮಯ ನೀಡಿತ್ತು. ಆದರೆ ನ್ಯಾಯಾಲಯ ನೀಡಿದ ಗಡುವಿನಲ್ಲಿ ಈ ಬಗ್ಗೆ ಸಿಬಿಐ ಉತ್ತರಿಸಿಲ್ಲ. ಇದರಿಂದ ಬೇಸಗೊಂಡ ವಿಶೇಷ ನ್ಯಾಯಾಧೀಶರ ಪೀಠ ಈ ತೀರ್ಪು ನೀಡಿದೆ.