ನವದೆಹಲಿ: ನೈಋತ್ಯ ದಿಲ್ಲಿಯ ದ್ವಾರಕಾದಲ್ಲಿ ದೆಹಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಎಸ್‌ಐ) ಅವರನ್ನು ಆಕೆಯ ವಕೀಲ ಪತಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ಎಸ್‌ಐ ಡೋಲಿ ತೆವಾಥಿಯಾ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಬಗ್ಗೆ ತಿಳಿಸಿದ್ದಾರೆ. ನಂತರ ಘಟನೆ ವೈರಲ್ ಆಗಿದೆ. ತಮ್ಮ ಪತಿ ಮಾಡುತ್ತಿರುವ ಹಲ್ಲೆಯ ವಿಡಿಯೋ ಅವರು ಪೋಸ್ಟ್ ಮಾಡಿದ್ದಾರೆ.
“ನಾನು ದೆಹಲಿ ಪೋಲೀಸ್‌ನಲ್ಲಿ ಸಬ್-ಇನ್‌ಸ್ಪೆಕ್ಟರ್ ಆಗಿದ್ದೇನೆ. ಪ್ರಸ್ತುತ ಹೆರಿಗೆ ರಜೆಯಲ್ಲಿದ್ದೇನೆ. ನನ್ನ ಪತಿ ವಕೀಲ ತರುಣ್ ದಾಬಸ್‌ನಿಂದ ನಾನು ನಿರಂತರವಾಗಿ ದೌರ್ಜನ್ಯ ಎದುರಿಸುತ್ತಿದ್ದೇನೆ. ಇಂದು ಅವನು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ದಯವಿಟ್ಟು ಕ್ರಮತೆಗೆದುಕೊಳ್ಳಿ” ಎಂದು ಅವರು ತಮ್ಮ ವೈಯಕ್ತಿಕ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ್ದಾರೆ.
ಪತ್ನಿಯ ಮೇಲೆ ಹಲ್ಲೆ ಮಾಡುವುದನ್ನು ಹಾಗೂ ನಿಂದಿಸಿ ಥಳಿಸಿ ಕೊಲೆ ಬೆದರಿಕೆ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪೊಲೀಸರು ವಕೀಲನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.