)
ಈ ಬಾರಿಯ ಐಪಿಎಲ್ ಇನ್ನೇನು ಕೊನೆಯ ಘಟ್ಟ ತಲುಪಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲ ತಂಡಗಳು ಸೆಮಿ ಫೈನಲ್ ಪ್ರವೇಶಿಸಲು ಭರ್ಜರಿ ಹೋರಾಟ ನಡೆಸಿವೆ. ಇಂದು ಕೊಲ್ಕತ್ತಾದ ಹಿಡನ್ ಗಾರ್ಡನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ.
ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ಈ ಎರಡು ತಂಡಗಳಲ್ಲಿ ಸಿಕ್ಸರ್ಸ್ ಗಳ ಸರದಾರರಿದ್ದು, ಇಷ್ಟು ದಿನ ಈ ಪಂದ್ಯಕ್ಕಾಗಿ ಕಾದಿದ್ದ ಪ್ರೇಕ್ಷಕರಿಗೆ ಇಂದು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ದೈತ್ಯ ಬ್ಯಾಟ್ಸ್ ಮ್ಯಾನ್ ಗಳ ಈ ಕಾದಾಟ ನೋಡಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆರ್ಸಿಬಿ ತಂಡ ಸೆಮಿ ಫೈನಲ್ ಗೆ ಬರುವ ಸಾಧ್ಯತೆ ಕಡಿಮೆ ಇದ್ದು, ಉಳಿದ ಯಾವ ತಂಡಗಳು ಸೆಮಿ ಫೈನಲ್ ಗೆ ಎಂಟ್ರಿ ಕೊಡಲಿವೆ ಇನ್ನೇನು ಶೀಘ್ರದಲ್ಲೇ ತೆರೆ ಬೀಳಲಿದೆ.