ಈ ಬಾರಿಯ ಐಪಿಎಲ್ ನಲ್ಲಿ ಯುವ ಪ್ರತಿಭೆಗಳು ಮಿಂಚುತ್ತಿದ್ದು, ಅತಿ ವೇಗದ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ, ಲಕ್ನೋ ಸೂಪರ್ ಜೈಂಟ್ಸ್ ನ ಯುವ ಬೌಲರ್ ಮಯಾಂಕ್ ಯಾದವ್ ನಿನ್ನೆಯ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಈ ಮೂಲಕ ಲಕ್ನೋ ತಂಡ ಆರ್ಸಿಬಿ ಎದುರು 28 ರನ್ ಗಳಿಂದ ಜಯಭೇರಿ ಆಗಿದೆ. ಆರ್‌ಸಿಬಿ ತಂಡ ತನ್ನ ಓಂ ಗ್ರೌಂಡ್ ನಲ್ಲಿ ಸತತ ಎರಡನೇ ಬಾರಿ ಹೀನಾಯ ಸೋಲನುಭವಿಸಿದೆ.
ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ. ಕೆಕೆಆರ್ ತಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೆ, ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ರೋಚಕ ಜಯ ಸಾಧಿಸಿದ್ದು, ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇಂದು ವಿಶಾಖಪಟ್ಟಣಂ ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಜಯಭೇರಿಯಾಗಲಿದೆ ಕಾದುನೋಡಬೇಕಾಗಿದೆ.