
ನಿನ್ನೆ ಗುಜರಾತ್ ಟೈಟನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ 64ನೇ ಪಂದ್ಯ ಮಳೆಯಿಂದ ರದ್ದಾಗಿದ್ದು, ಹೀಗಾಗಿ ಎರಡು ತಂಡಗಳಿಗೂ ಒಂದೊಂದು ಅಂಕ ನೀಡಲಾಗಿದೆ. ಈ ಮೂಲಕ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿರುವ ಗುಜರಾತ್ ಟೈಟನ್ಸ್ ಗೆ ತನ್ನ ಹೋಂ ಗ್ರೌಂಡ್ ನ ಕೊನೆಯ ಪಂದ್ಯ ಕೈ ತಪ್ಪಿದೆ.
ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿದ್ದು, ಎರಡು ತಂಡಗಳಿಗೂ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಡೆಲ್ಲಿ ಕ್ಯಾಪಿಟಲ್ ಪ್ಲೇ ಆಫ್ ತಲುಪಲು ದೊಡ್ಡ ಅಂತರದಿಂದ ಗೆಲ್ಲಬೇಕಾಗಿದ್ದು, ಲಕ್ನೋ ತಂಡಕ್ಕೆ ಉಳಿದ ಎರಡು ಪಂದ್ಯಗಳಲ್ಲೂ ಜಯ ಸಿಕ್ಕರೆ ಪ್ಲೇ ಆಫ್ ಹಾದಿ ಸುಗಮವಾಗಲಿದೆ.
ಒಟ್ಟಾರೆ ಎರಡು ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಲಕ್ನೋ ತಂಡ ಸೋತರೆ ಆರ್ಸಿಬಿ ತಂಡದ ಪ್ಲೇ ಆಫ್ ಆಸೆ ಇನ್ನೂ ಜೀವಂತವಾಗಿ ಉಳಿಯಲಿದೆ.