ನವದೆಹಲಿ: ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸೆಲ್ ಫೋನ್ ಸ್ಫೋಟಗೊಂಡ ನಂತರ ತುರ್ತು ಉದಯಪುರದಲ್ಲಿ ಭೂಸ್ಪರ್ಶ ಮಾಡಿದೆ.
ಏರ್ ಇಂಡಿಯಾ ವಿಮಾನ ಟೇಕಾಫ್ ವೇಳೆ ಪ್ರಯಾಣಿಕರೊಬ್ಬರ ಸೆಲ್ ಫೋನ್ ಸ್ಫೋಟಗೊಂಡ ನಂತರ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ನಂತರ ಪೈಲಟ್ ವಿಮಾನ ಇಳಿಸಿದ್ದಾರೆ.
ಸಮಸ್ಯೆ ಪರಿಶೀಲಿಸಿ ಸರಿಪಡಿಸಿದ ನಂತರ ತುರ್ತು ಭೂಸ್ಪರ್ಶ ಮಾಡಿದ ಒಂದು ಗಂಟೆಯೊಳಗೆ ವಿಮಾನ ಹೊರಟಿತು.
ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೊರಡುವ ಮುನ್ನವೇ ಪ್ರಯಾಣಿಕರೊಬ್ಬರ ಫೋನ್ ಸ್ಫೋಟಗೊಂಡಾಗ ಉದಯಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಸೆಲ್ ಫೋನ್ ಸ್ಫೋಟಗೊಂಡಿದ್ದರಿಂದ ಪ್ರಯಾಣಿಕರು ಗೊಂದಲಕ್ಕೊಳಗಾದರು. ಉದಯಪುರದ ದಬೋಕ್ ವಿಮಾನ ನಿಲ್ದಾಣದಿಂದ ಜೆಟ್ ದೆಹಲಿಗೆ ಹೊರಟ ಕೂಡಲೇ ಫೋನ್ ಸ್ಫೋಟಗೊಂಡಿದೆ. ಎಲ್ಲಾ ತಾಂತ್ರಿಕ ತಪಾಸಣೆ ನಂತರ ವಿಮಾನ ದೆಹಲಿಗೆ ತೆರಳಿದೆ. ವಿಮಾನದಲ್ಲಿ ಒಟ್ಟು 140 ಜನರಿದ್ದರು ಎಂದು ಹೇಳಲಾಗಿದೆ.