alex Certify Big News: ನ.27 ರಿಂದ ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್‌ – ಡೀಸೆಲ್‌ ವಾಹನಗಳ ಪ್ರವೇಶ ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ನ.27 ರಿಂದ ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್‌ – ಡೀಸೆಲ್‌ ವಾಹನಗಳ ಪ್ರವೇಶ ಬಂದ್

ಮಿತಿಮೀರಿದ ವಾಯುಮಾಲಿನ್ಯದಿಂದ ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗರು ವಿಷಗಾಳಿ ಸೇವಿಸಿ ಬದುಕುವಂತಾಗಿದೆ. ವಾಯು ಗುಣಮಟ್ಟ ಸೂಚ್ಯಂಕವು ದೇಶದಲ್ಲೇ ಅತ್ಯಂತ ಗರಿಷ್ಠ ತಲುಪಿದ್ದು, ’’ಅಪಾಯಕಾರಿ’’ ಮಟ್ಟದಲ್ಲೇ ಮುಂದುವರಿಯುತ್ತಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ದೆಹಲಿಯ ಸಮಸ್ಯೆ ಇದಾಗುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತ್ವರಿತ ಕ್ರಮಕ್ಕಾಗಿ ಈಗಾಗಲೇ ಸುಪ್ರೀಂಕೋರ್ಟ್‌ ಚಾಟಿ ಬೀಸಿದೆ. ಅದರ ಪರಿಣಾಮವಾಗಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಆಡಳಿತವು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಂತೆ, ನವೆಂಬರ್‌ 27 ರಿಂದ ದೆಹಲಿಗೆ ಪೆಟ್ರೋಲ್‌, ಡೀಸೆಲ್‌ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಡಿಸೆಂಬರ್‌ 3ನೇ ತಾರೀಖಿನವರೆಗೂ ಈ ನಿರ್ಬಂಧ ಜಾರಿಯಲ್ಲಿ ಇರಲಿದೆ. ದೆಹಲಿಯನ್ನು ಪ್ರವೇಶಿಸಲು ಕೇವಲ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್‌ ವಾಹನಗಳಿಗೆ ಮಾತ್ರವೇ ಅನುಮತಿ ನೀಡಲಾಗಿದೆ. ಈ ವೇಳೆ ವಾಯು ಗುಣಮಟ್ಟ ಸುಧಾರಣೆಯನ್ನು ಗಮನಿಸಿ, ನಿರ್ಬಂಧದ ಅವಧಿಯನ್ನು ವಿಸ್ತರಿಸುವ ಚಿಂತನೆ ದೆಹಲಿ ಸರಕಾರದ್ದಾಗಿದೆ.

ತನ್ನ ಸಂಕಷ್ಟದ ದಿನಗಳನ್ನು ನೆನೆದ ಶತಾಯುಷಿ: ವಿಡಿಯೋ ನೋಡಿ ಕರಗಿತು ನೆಟ್ಟಿಗರ ಮನ

ಇನ್ನು ಸರಕಾರಿ ನೌಕರರು ತಮ್ಮ ಕ್ವಾಟರ್ಸ್‌ಗಳಿಂದ ಕಚೇರಿಗೆ ತೆರಳಲು ಕೂಡ ಅನುಕೂಲವಾಗುವಂತೆ ದೆಹಲಿ ಸರಕಾರವೇ ಸಿಎನ್‌ಜಿ ಬಳಕೆಯ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ರಸ್ತೆಗಿಳಿಸಿದೆ. ಗುಲಾಬಿ ಬಾಗ್‌ ಮತ್ತು ನಿಮ್ರಿ ಕಾಲನಿಯಲ್ಲಿ ಈ ವಾಹನಗಳು ಸಂಚರಿಸಲಿವೆ ಎಂದು ದೆಹಲಿ ಸರಕಾರದ ಪರಿಸರ ಸಚಿವ ಗೋಪಾಲ್‌ ರಾಯ್‌ ಅವರು ಹೇಳಿದ್ದಾರೆ.

ಇನ್ನು ಸಚಿವಾಲಯದಿಂದ ಸಮೀಪದ ಮೆಟ್ರೋ ಕೇಂದ್ರಗಳಿಗೆ ನಿರಂತರವಾಗಿ ಸಂಚರಿಸುವ ಸಿಎನ್‌ಜಿ ಬಳಕೆಯ ಶಟಲ್‌ ಬಸ್‌ಗಳನ್ನು ಹತ್ತು ನಿಮಿಷಕ್ಕೆ ಒಂದರಂತೆ ಸಂಚಾರ ಮಾಡಿಸಲಾಗುವುದು. ಸಾರ್ವಜನಿಕ ಸಾರಿಗೆಯನ್ನು ಎಲ್ಲ ಸರಕಾರಿ ನೌಕರರು ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಲಾಗಿದೆ. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ಜಾರಿಗೆ ತರಲಾಗುವುದು ಎಂದು ರಾಯ್‌ ತಿಳಿಸಿದ್ದಾರೆ.

ನವೆಂಬರ್‌ 13ರಂದು ಸುಪ್ರೀಂಕೋರ್ಟ್‌ ಚಾಟಿ ಬೀಸಿದ ಪರಿಣಾಮ ದೆಹಲಿ ಸರಕಾರವು ಕೂಡಲೇ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಆದೇಶ ಹೊರಡಿಸಿತ್ತು. ಮಕ್ಕಳು ಮನೆಯಿಂದಲೇ ಆನ್‌ಲೈನ್‌ ವಿದ್ಯಾಭ್ಯಾಸ ನಡೆಸಿ, ವಿಷಗಾಳಿ ಸೇವನೆಯಿಂದ ಪಾರಾಗಲಿ ಎಂದು ಸೂಚಿಸಿತ್ತು. ಜತೆಗೆ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಹಾಗೂ ಕಟ್ಟಡ ಕೆಡವುದನ್ನು ಕೂಡ ನಿರ್ಬಂಧಿಸಿತ್ತು. ಇದೇ ಸೋಮವಾರ ಕಟ್ಟಡ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...