![](https://kannadadunia.com/wp-content/uploads/2023/06/159373c5-8fd7-42d6-93e8-5b04ddc89ddf.jpg)
ಬ್ಯಾಂಕಾಕ್ ನಿಂದ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಐವರು ಪ್ರಯಾಣಿಕರಿಂದ ಬರೋಬ್ಬರಿ 5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಎಲ್ಲವೂ ಪ್ರತ್ಯೇಕ ಪ್ರಕರಣಗಳಾಗಿದ್ದು, ವಶಪಡಿಸಿಕೊಂಡಿರುವ ಚಿನ್ನದ ಮೌಲ್ಯ 2.65 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಐವರು ಪ್ರಯಾಣಿಕರ ವಿರುದ್ಧವೂ ಕಸ್ಟಮ್ಸ್ ಕಾಯ್ದೆ ಅಡಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.