ಒಮಿಕ್ರಾನ್ ವೈರಸ್ ಹಬ್ಬುವ ಭೀತಿಯ ನಡುವೆಯೇ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಹಾಗೂ ಗೊಂದಲ ಸೃಷ್ಟಿಯಾಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪರಿಸ್ಥಿತಿ ಸುಧಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಮಾನ ನಿಲ್ದಾಣದ ಆಡಳಿತಕ್ಕೆ ತಾಕೀತು ಮಾಡಿದ್ದಾರೆ.
ಡಿಸೆಂಬರ್ 1ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾದ ಚಿತ್ರಗಳು ವೈರಲ್ ಆಗಿದ್ದು, ಗಿಜಿಗುಡುವ ರೈಲ್ವೇ ನಿಲ್ದಾಣದಂತೆ ದೇಶದ ರಾಜಧಾನಿಯ ವಿಮಾಣ ನಿಲ್ದಾಣ ಕಾಣುತ್ತಿದೆ. ಮಾಸ್ಕ್ ಧರಿಸಿರುವ ಪ್ರಯಾಣಿಕರು ಕೋವಿಡ್ ಪರೀಕ್ಷೆಗಳಿಗಾಗಿ ಕಾಯುತ್ತಿದ್ದು, ಎಂಟು ಗಂಟೆಗಳ ಕಾಲ ಜನಜಂಗುಳಿ ಹಾಗೂ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು, ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದ ಕಾರಣ ವಿಮಾನ ನಿಲ್ದಾಣವು ಕೋವಿಡ್ ಹಾಟ್‌ಸ್ಪಾಟ್ ಆಗಿದೆ ಎಂದು ಅನೇಕರು ದೂರಿದ್ದರು.
ಸ್ನೇಹಿತರು ನೀಡಿದ ಉಡುಗೊರೆ ಕಂಡು ಬಿದ್ದು ಬಿದ್ದು ನಕ್ಕ ವಧು – ವರ..!
ಈ ವಿಚಾರ ತಿಳಿದ ಕೂಡಲೇ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ), ವಲಸೆ ಬ್ಯೂರೋ ಹಾಗೂ ಜಿಎಂಆರ್ ಸಮೂಹದ ನೇತೃತ್ವದಲ್ಲಿರುವ ಡಿಐಎಎಲ್ ಆಡಳಿತ ವರ್ಗದೊಂದಿಗೆ ಸಭೆ ನಡೆಸಿದ್ದಾರೆ ಸಿಂಧಿಯಾ. ದೆಹಲಿ ವಿಮಾನ ನಿಲ್ದಾಣದಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆ ನಡೆಸುವ ಏಕೈಕ ಪ್ರಯೋಗಾಲಯ ಜೆಜೆಸ್ಟ್ರಿಂಗ್ಸ್ ಡಯಾಗ್ನಾಸ್ಟಿಕ್ಸ್‌ನ ಸಿಬ್ಬಂದಿ ಸಹ ಈ ಸಭೆಯಲ್ಲಿ ಭಾಗಿಯಾಗಿದ್ದರು. ಜನಜಂಗುಳಿ ನಿರ್ವಹಣೆಗೆ ಇನ್ನಷ್ಟು ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಲು ಡಿಐಎಎಲ್ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
’ರಿಸ್ಕ್-ಪೀಡಿತ’ ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ನವೆಂಬರ್ 30ರಂದು ಕೇಂದ್ರ ಸರ್ಕಾರ ಕಳುಹಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಮಿಕ್ಕ ದೇಶಗಳಿಂದ ಬರುವ ಪ್ರಯಾಣಿಕರ ಪೈಕಿ 2%ನಷ್ಟು ಮಂದಿಯನ್ನು ರ‍್ಯಾಂಡಂ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಈ ಎಲ್ಲರೂ ಪರೀಕ್ಷಾ ಫಲಿತಾಂಶ ಬರುವವರೆಗೂ ವಿಮಾನ ನಿಲ್ದಾಣದಲ್ಲಿಯೇ ಇದ್ದು, ನೆಗೆಟಿವ್ ವರದಿ ಬಂದಲ್ಲಿ ಮಾತ್ರವೇ ವಿಮಾನ ನಿಲ್ದಾಣದಿಂದ ಹೊರಗೆ ಬರಬಹುದು.
ಮೀನು ಮಾರುತ್ತಿದ್ದ ಮೂವರಿಗೆ ಚೂರಿ ಇರಿತ, ಬೈಕ್ ನಲ್ಲಿ ಬಂದ ಮುಸುಕುಧಾರಿಗಳಿಂದ ಕೃತ್ಯ
ಕಾಯುವ ಅವಧಿಯನ್ನು ಕಡಿಮೆ ಮಾಡಲೆಂದು ಇನ್ನಷ್ಟು ದುಬಾರಿಯಾದ ರ‍್ಯಾಪಿಡ್ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗುತ್ತಿರುವ ಪ್ರಯಾಣಿಕರು ತಲಾ 3,500 ರೂ.ಗಳನ್ನು ಪಾವತಿ ಮಾಡುತ್ತಿದ್ದಾರೆ. ಈ ಪರೀಕ್ಷೆಯ ವರದಿಯು ಎರಡು ಗಂಟೆಗಳಲ್ಲಿ ಕೈತಲುಪಲಿದೆ. 500 ರೂ.ಗಳಿಗೆ ಮಾಡುವ ಸಾಮಾನ್ಯ ಆರ್‌ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶ ಪಡೆಯಲು ಎಂಟು ಗಂಟೆಗಳವರೆಗೆ ಕಾಯಬೇಕಾಗುತ್ತದೆ.