ದೆಹಲಿ ವಾಯುಮಾಲಿನ್ಯದ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠವು, 5 ಸ್ಟಾರ್ ಅಥವಾ 7 ಸ್ಟಾರ್ ಹೋಟೆಲ್ಗಳಲ್ಲಿ ಕುಳಿತವರು ಮಾಲಿನ್ಯಕ್ಕೆ ರೈತರೇ ಕಾರಣ ಎಂದು ದೂಷಿಸುತ್ತಿದ್ದಾರೆ. ಆದರೆ ಸುಪ್ರೀಂ ಕೋರ್ಟ್ಗೆ ರೈತರ ಸಂಕಷ್ಟ ಕಾಣುತ್ತಿದೆ ಎಂದು ಹೇಳಿದೆ.
‘5 ಸ್ಟಾರ್ ಹಾಗೂ 7 ಸ್ಟಾರ್ನಲ್ಲಿ ಕುಳಿತವರು ಮಾಲಿನ್ಯಕ್ಕೆ ರೈತರೇ ಕಾರಣ ಎಂದು ದೂಷಿಸುತ್ತಿದ್ದಾರೆ. ಪ್ರತಿ ಭೂಮಿ ಹಿಡುವಳಿಯಿಂದ ಒಬ್ಬ ರೈತ ಎಷ್ಟು ಸಂಪಾದನೆ ಮಾಡುತ್ತಾನೆ ಎಂದು ನೀವು ಎಂದಾದರೂ ನೋಡಿದ್ದೀರಾ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಪ್ರಶ್ನೆ ಮಾಡಿದರು. ನಿರ್ಬಂಧ ಹೇರಿದರೂ ಪಟಾಕಿ ಸುಡಲು ಕೆಲವರು ತಯಾರಿದ್ದಾರೆ. ಎಲ್ಲವನ್ನೂ ನ್ಯಾಯಾಂಗದ ಆದೇಶದ ಮೂಲಕವೇ ಮಾಡಲು ಸಾಧ್ಯವಿಲ್ಲ. ಕೆಲವೊಂದು ವಿಚಾರಗಳಲ್ಲಿ ಸ್ವಯಂ ಜವಾಬ್ದಾರಿ ಕೂಡ ಇರಬೇಕು ಎಂದು ಹೇಳಿದ್ದಾರೆ.
ಸುಪ್ರಿಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ ದೆಹಲಿ ಸರ್ಕಾರ ಮಾಲಿನ್ಯ ಬಿಕ್ಕಟ್ಟಿನಲ್ಲಿರುವ ಐದು ರಾಜ್ಯಗಳಲ್ಲಿ ಸ್ಥಾನ ಪಡೆದ ಬಳಿಕ ಸಂಪೂರ್ಣವಾಗಿ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಜಾರಿಗೆ ತಂದಿರುವುದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ವಿಚಾರಣೆಯ ವೇಳೆ ದೆಹಲಿ ಸರ್ಕಾರವನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, ಸಾರ್ವಜನಿಕ ಕಚೇರಿಗಳನ್ನು ಸಂಪೂರ್ಣವಾಗಿ ಮುಚ್ಚಿರುವ ನೀವು ಸಂಚಾರವನ್ನೂ ಏಕೆ ಬಂದ್ ಮಾಡಿಸಬಾರದು ಎಂದು ಪ್ರಶ್ನಿಸಿದ್ದಾರೆ.
ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಸಿಂಘ್ವಿ, ಐದು ಮಾಲಿನ್ಯ ರಾಜ್ಯಗಳ ಪೈಕಿ ದೆಹಲಿ ಮಾತ್ರ 100 ಪ್ರತಿಶತ ವರ್ಕ್ ಫ್ರಮ್ ಹೋಂ ಆದೇಶ ನೀಡಿದೆ. ಅಲ್ಲದೇ ನಾವು ಎಲ್ಲಾ ರೀತಿಯ ಹಣಕಾಸಿನ ನೆರವನ್ನೂ ನೀಡುತ್ತಿದ್ದೇವೆ ಎಂದು ಹೇಳಿದ್ರು.