ದೆಹಲಿಯ ಪ್ರತಿಷ್ಟಿತ ಏಮ್ಸ್ನ ಆಸ್ಪತ್ರೆ ಆವರಣದಲ್ಲಿಯೇ ಅಗ್ನಿಶಾಮಕ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಆಸ್ಪತ್ರೆ ಆವರಣದಲ್ಲೇ ಅಗ್ನಿಶಾಮಕ ಕೇಂದ್ರವನ್ನು ಸ್ಥಾಪನೆ ಮಾಡಿದ ದೇಶದ ಮೊದಲ ಆಸ್ಪತ್ರೆ ಎಂಬ ಕೀರ್ತಿಗೆ ಏಮ್ಸ್ ಪಾತ್ರವಾಗಿದೆ ಎಂದು ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಹೇಳಿದ್ರು.
ದೆಹಲಿ ಅಗ್ನಿಶಾಮಕ ದಳ ನಿರ್ದೇಶಕ ಅತುಲ್ ಗರ್ಗ್ ಈ ವಿಚಾರವಾಗಿ ಮಾತನಾಡಿದ್ದು, ಏಮ್ಸ್ ಆಸ್ಪತ್ರೆಯು ಡಿಎಫ್ಎಸ್ ಜೊತೆಗಿನ ಸಹಭಾಗಿತ್ವದ ಮೂಲಕ ಈ ಅಗ್ನಿಶಾಮಕ ಕೇಂದ್ರವನ್ನು ಸ್ಥಾಪನೆ ಮಾಡಿದೆ ಎಂದು ಹೇಳಿದ್ರು.
ಅಗ್ನಿಶಾಮಕ ದಳಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಏಮ್ಸ್ ಒದಗಿಸಲಿದೆ ಹಾಗೂ ಸಿಬ್ಬಂದಿ ಸೌಕರ್ಯವನ್ನು ದೆಹಲಿ ಅಗ್ನಿಶಾಮಕದಳ ನೋಡಿಕೊಳ್ಳಲಿದೆ ಎಂದು ಅತುಲ್ ಗರ್ಗ್ ಹೇಳಿದ್ದಾರೆ.
ದೆಹಲಿ ಅಗ್ನಿಶಾಮಕ ದಳಕ್ಕೆ ಇನ್ನೊಂದು ಹೆಮ್ಮೆಯ ಕ್ಷಣ. ಏಮ್ಸ್ ಜೊತೆ ಕೈ ಜೋಡಿಸಿರುವ ಡಿಎಫ್ಎಸ್ ಆಸ್ಪತ್ರೆ ಕ್ಯಾಂಪಸ್ನಲ್ಲಿಯೇ ತುರ್ತು ಪರಿಸ್ಥಿತಿಗಾಗಿ ಅಗ್ನಿಶಾಮಕ ಕೇಂದ್ರವನ್ನೇ ಸ್ಥಾಪನೆ ಮಾಡಿದೆ.
ಭಾರತದ ಇತಿಹಾಸದಲ್ಲಿಯೇ ಆಸ್ಪತ್ರೆ ಆವರಣದ ಒಳಗಡೆಯೇ ಅಗ್ನಿಶಾಮಕ ಕೇಂದ್ರ ಸ್ಥಾಪನೆ ಮಾಡಿದ ಮೊದಲ ಆಸ್ಪತ್ರೆ ಏಮ್ಸ್ ಆಗಿದೆ. ಈ ಅಗ್ನಿಶಾಮಕ ದಳ ಕೇಂದ್ರದ ಮೂಲ ಸೌಕರ್ಯಗಳ ಜವಾಬ್ದಾರಿಯನ್ನು ಏಮ್ಸ್ ವಹಿಸಲಿದೆ. ಹಾಗೂ ಸಿಬ್ಬಂದಿ ಸೌಕರ್ಯವನ್ನು ಡಿಎಫ್ಎಸ್ ನೋಡಿಕೊಳ್ಳಲಿದೆ ಎಂದು ಡಿಎಫ್ಎಸ್ ನಿರ್ದೇಶಕ ಅತುಲ್ ಗರ್ಗ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.