ನವದೆಹಲಿ: ದೆಹಲಿಯ ಸೌತ್ ಎಕ್ಸ್ ಟೆನ್ಶನ್ ಕ್ಲಬ್ ನಲ್ಲಿ ಹಲವಾರು ಗಂಟೆಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ 10 ಜನರನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.
ಭಾನುವಾರ ರಾಷ್ಟ್ರ ರಾಜಧಾನಿಯ ಸೌತ್ ಎಕ್ಸ್‌ಟೆನ್ಶನ್ ಪ್ರದೇಶದ ಕ್ಲಬ್‌ನಲ್ಲಿ ದೆಹಲಿ ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ರಕ್ಷಿಸುವ ಮೊದಲು ಕನಿಷ್ಠ 10 ಜನ ಗಂಟೆಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದರು.
ದೆಹಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗರ್ಗ್ ಅವರು ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದು, ಸೌತ್ ಎಕ್ಸ್ ಟೆನ್ಶನ್ ಮೆಟ್ರೋ ನಿಲ್ದಾಣದ ಬಳಿ ಇರುವ ಕೋಡ್ ಕ್ಲಬ್‌ನಿಂದ ಬೆಳಿಗ್ಗೆ ಸುಮಾರು 5:42 ಕ್ಕೆ ಅಗ್ನಿಶಾಮಕ ಕರೆ ಬಂದಿದೆ.ಕರೆ ಆಧರಿಸಿ ರಕ್ಷಣಾ ತಂಡ ಸ್ಥಳಕ್ಕೆ ತೆರಳಿದ್ದು, 10 ಜನರನ್ನು DFS ಮೂಲಕ ಲಿಫ್ಟ್ ನಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಗಾರ್ಗ್ ಹಂಚಿಕೊಂಡ ಚಿತ್ರಗಳಲ್ಲಿ, ರಕ್ಷಣಾ ತಂಡವು ಕ್ಲಬ್‌ಗೆ ಪ್ರವೇಶಿಸಲು ಏಣಿ ಮತ್ತು ಕಿಟಕಿಯ ಗಾಜುಗಳನ್ನು ಒಡೆದು ಹಾಕುವುದನ್ನು ಕಾಣಬಹುದು. ಲಿಫ್ಟ್ ವೈಫಲ್ಯದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.