ಪ್ರತಿಯೊಬ್ಬ ಸಂಘಟಿತ ವಲಯದ ನೌಕರರು ಕೂಡ ತಮ್ಮ ವಾರ್ಷಿಕ ಆದಾಯದ ಬಗ್ಗೆ ಹಣಕಾಸು ವರ್ಷದ ಕೊನೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲೇಬೇಕು. ಇದು ಒಳ್ಳೆಯದು ಕೂಡ.
ಒಂದು ವೇಳೆ ಬ್ಯಾಂಕ್ ಗಳಲ್ಲಿನ ಠೇವಣಿ ಅಥವಾ ದೊಡ್ಡ ವ್ಯವಹಾರ, ಖರೀದಿ ವೇಳೆ ಮೂಲದಲ್ಲೇ ತೆರಿಗೆ ಕಡಿತಗೊಂಡಿದ್ದರೆ ಐಟಿಆರ್ ಮೂಲಕ ವಾಪಸ್ ಪಡೆಯಬಹುದಾಗಿದೆ.
ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ: ಐಟಿಆರ್ ಸಲ್ಲಿಕೆ ಅವಧಿ ಡಿ.31ರವರೆಗೆ ವಿಸ್ತರಣೆ
ಈ ಹಣಕಾಸು ವರ್ಷ (2020-21) ಐಟಿಆರ್ ಸಲ್ಲಿಕೆಗೆ ಎರಡು ಬಾರಿ ಗಡುವು ವಿಸ್ತರಿಸಲಾಗಿದೆ. ಅದರಂತೆ ಡಿಸೆಂಬರ್ 31ರೊಳಗೆ ಐಟಿಆರ್ ಸಲ್ಲಿಕೆಗೆ ಡೆಡ್‌ಲೈನ್, ಐಟಿ ಇಲಾಖೆಯಿಂದ ನಿಗದಿಯಾಗಿದೆ.
ಒಂದು ವೇಳೆ ಡೆಡ್‌ಲೈನ್ ಒಳಗೆ ಐಟಿಆರ್ ಸಲ್ಲಿಕೆ ಆಗದಿದ್ದರೆ, ಐದು ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಕಳೆದ ವರ್ಷ ಈ ದಂಡದ ಮೊತ್ತವು 10 ಸಾವಿರ ರೂಪಾಯಿ ಇತ್ತು. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಈ ಹಣಕಾಸು ವರ್ಷಕ್ಕೆ ದಂಡದ ಮೊತ್ತ ಕಡಿತಗೊಳಿಸಿದೆ.
ಇಷ್ಟೇ ಅಲ್ಲದೆಯೇ ದಂಡದ ಮೇಲೆ ತೆರಿಗೆ ಪಾವತಿದಾರರು ಬಾಕಿ ತೆರಿಗೆಯ ಮೊತ್ತಕ್ಕೆ ಬಡ್ಡಿ ಮೇಲಿನ ದಂಡ ಎನ್ನುವಂತೆ ಹೆಚ್ಚುವರಿ ಹಣ ಕೂಡ ಪಾವತಿಸಬೇಕಾಗುತ್ತದೆ.
ಅಂದರೆ, ಬಾಕಿ ತೆರಿಗೆ ಮೊತ್ತ 1 ಲಕ್ಷ ರೂ.ಗಿಂತ ಹೆಚ್ಚಿದ್ದಲ್ಲಿ ಪ್ರತಿ ತಿಂಗಳಿಗೆ ಶೇ. 1ರಷ್ಟು ದಂಡ (ಬಡ್ಡಿ) ಹೆಚ್ಚುವರಿಯಾಗಿ ಕಟ್ಟಬೇಕಾಗಿದೆ.