ಕೋವಿಡ್ ಸಾಂಕ್ರಮಿಕದಿಂದ ಅನೇಕರ ಜೀವನ, ಜೀವ ಹಾಗೂ ಜೀವನೋಪಾಯಗಳು ಛಿದ್ರವಾಗಿರುವುದು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ, ಈ ಪಿಡುಗಿನಿಂದ ಬಹಳ ಪುಟ್ಟ ವಯಸ್ಸಿಗೇ ಅನಾಥರಾದ ಮಕ್ಕಳ ಪಾಡು ಎಂಥವರಿಗೂ ಕರುಳು ಹಿಂಡುವಂತಿದೆ.
ಉತ್ತರಾಖಂಡದ ಡೆಹ್ರಾಡೂನ್‌ನ ಜಾಯ್ ಎಂಬ ಎನ್‌ಜಿಓದ ಸ್ಥಾಪಕ ಜೈ ಶರ್ಮ, ಇಂಥ 100 ಮಕ್ಕಳನ್ನು ದತ್ತು ಪಡೆಯುವ ಅಭಿಯಾನಕ್ಕೆ ಮುಂದಾಗಿದ್ದಾರೆ. ಅದಾಗಲೇ 20 ಮಕ್ಕಳನ್ನು ದತ್ತು ಪಡೆದಿರುವ ಶರ್ಮಾ ಫೇಸ್ಬುಕ್ ಪೋಸ್ಟ್ ಒಂದನ್ನು ಹಾಕಿದ್ದು, “ಕೋವಿಡ್-19ನ ಎರಡನೇ ಅಲೆ ಆರಂಭಗೊಂಡಾಗ ಮೊದಲ ಎರಡು ವಾರಗಳಲ್ಲಿ, ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡ ಮಕ್ಕಳು ತಂತಮ್ಮ ಮನೆಗಳಲ್ಲಿ ಅನಾಥರಾಗಿ ಬದುಕುತ್ತಿರುವ ಐದು ಕುಟುಂಬಗಳನ್ನು ನೋಡಿದ್ದೆವು. ಇವರಲ್ಲಿ ಕೆಲ ಮಕ್ಕಳು 4-5ನೇ ತರಗತಿಯಲ್ಲಿ ಓದುತ್ತಿದ್ದು, ಒಬ್ಬ 12ನೇ ತರಗತಿಯಲ್ಲೂ ಹಾಗೂ ಮಿಕ್ಕವರು ಇನ್ನೂ ಸಣ್ಣ ವಯಸ್ಸಿನವರಾಗಿದ್ದರು. ಇಂಥ ಪರಿಸ್ಥಿತಿಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಹಾಗೂ ಸಾಂಕ್ರಮಿಕ ವ್ಯಾಪಿಸುತ್ತಾ ಹೋದಂತೆ ಇಂಥ ಇನ್ನಷ್ಟು ಪ್ರಕರಣಗಳನ್ನು ಎದುರಿಸಲಿದ್ದೇವೆ ಎಂದು ಮನವರಿಕೆಯಾಗಿತ್ತು” ಎಂದು ತಿಳಿಸಿದ್ದಾರೆ.
ವೇಶ್ಯಾವಾಟಿಕೆಗೆ ಬಾಲಕಿ ಬಳಕೆ, 7 ಮಂದಿಯಿಂದ ನಿರಂತರ ಅತ್ಯಾಚಾರ; ಗರ್ಭಿಣಿಯಾದ ನಂತರ ಪೊಲೀಸರಿಗೆ ದೂರು
“ಒಂದು ವಾರದೊಳಗೆ 50 ಮಕ್ಕಳನ್ನು ದತ್ತು ಪಡೆಯುವ ಗುರಿಯನ್ನು ಮುಟ್ಟಿ, ಹಂತಹಂತವಾಗಿ 100 ಮಕ್ಕಳನ್ನು ದತ್ತು ಪಡೆಯಲಿದ್ದೇವೆ. ಜೈ ಶರ್ಮಾ ಆದ ನಾನು ಈ ಮಕ್ಕಳು ತಮ್ಮ ಕಾಲ ಮೇಲೆ ನಿಂತುಕೊಳ್ಳುವಷ್ಟು ಸಮರ್ಥರಾಗುವವರೆಗೂ ನನ್ನ ಕೈಲಾದಷ್ಟು ಸಹಾಯ ಮಾಡಲು ಸಿದ್ಧವಿದ್ದೇನೆ!” ಎಂದಿದ್ದಾರೆ.
https://www.facebook.com/JustOpenYourselfDehradun/posts/4282015421865907