![](https://kannadadunia.com/wp-content/uploads/2020/12/AnnaHazare1AP.jpg)
ನವದೆಹಲಿ: ದೆಹಲಿ ಚುನಾವಣಾ ಫಲಿತಾಂಶ ಕೆಲವೇ ಹೊತ್ತಲ್ಲಿ ಪ್ರಕಟವಾಗಲಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹಿನ್ನಡೆ ಸಾಧಿಸಿದೆ. ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದೆ.
ದೆಹಲಿ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿರುವ ಅಣ್ಣಾ ಹಜಾರೆ, ಆಪ್ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾಯಕನ ನಡವಳಿಕೆ, ಆಲೋಚನೆಗಳು ಶುದ್ಧವಾಗಿರಬೇಕು. ಜೀವನವು ದೋಷರಹಿತವಾಗಿರಬೇಕು, ತ್ಯಾಗ ಇರಬೇಕು. ಇದನ್ನು ನಾನು ಅರವಿಂದ್ ಕೇರಿವಾಲ್ ಗೆ ಯಾವಾಗಲೂ ಹೇಳಿದ್ದೆ ಎಂದು ಹೇಳಿದ್ದಾರೆ.
ಈ ಗುಣಗಳು ಜನರು ನಂಬಿಕೆ ಇಡಲು ಅನುವು ಮಾಡಿಕೊಡುತ್ತವೆ. ಈ ವಿಚಾರವನ್ನು ನಾನು ಹಿಂದೆಯೇ ಅರವಿಂದ್ ಕೇಜ್ರಿವಾಲ್ ಅವರಿಗೆ ಹೇಳಿದ್ದೆ. ಆದರೆ ಅವರು ಗಮನ ಹರಿಸಲಿಲ್ಲ. ಕೇಜ್ರಿವಾಲ್ ಹಣ, ಅಧಿಕರ ಮದ್ಯದ ಹಗರಣದಲ್ಲಿ ಮುಳುಗಿದರು ಎಂದು ಕಿಡಿಕಾರಿದ್ದಾರೆ.