![](https://kannadadunia.com/wp-content/uploads/2021/06/Untitled-design-2021-06-30T151449331_60dc3cddb87e7_800x420.png)
ರಾಜ್ ಕೌಶಲ್ ಅಂತ್ಯಕ್ರಿಯೆ ವೇಳೆ ಪತ್ನಿ ಮಂದಿರಾ ಬೇಡಿ ಭಾವುಕರಾದ್ರು. ಪತಿ ಶವವನ್ನ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಂದಿರಾ ಬೇಡಿಯನ್ನ ರೋನಿತ್ ರಾಯ್ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಅಂತ್ಯಕ್ರಿಯೆಯ ಫೋಟೋಗಳಲ್ಲಿ ಮಂದಿರಾ ಬೇಡಿ ಪತಿಗೆ ಅಂತಿಮ ನಮನ ಸಲ್ಲಿಸುತ್ತಿರೋದನ್ನ ಕಾಣಬಹುದಾಗಿದೆ. ಪತಿಯ ಶವವನ್ನ ಸಾಗಿಸುವ ವೇಳೆ ಹಿಂದೂ ಸಂಪ್ರದಾಯವನ್ನ ಮೀರಿ ಮಂದಿರಾ ಬೇಡಿ ಮಡಕೆಯನ್ನ ತಾವೇ ಹೊತ್ತು ಸಾಗಿದ್ದಾರೆ.
ಅಂತ್ಯಕ್ರಿಯೆ ವೇಳೆ ಒಡೆದು ಹಾಕುವ ಮಡಕೆಯನ್ನ ಮಂದಿರಾ ಬೇಡಿಯೇ ಹಿಡಿದುಕೊಂಡಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಈ ಮಡಕೆಯನ್ನ ಅಂತ್ಯಕ್ರಿಯೆ ನೇತೃತ್ವವನ್ನ ವಹಿಸುವ ಪುರುಷ ಸದಸ್ಯ ಹಿಡಿದುಕೊಳ್ತಾರೆ.
ಕೌಶಲ್ ಬಾಲಿವುಡ್ನ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಮಿಂಚಿದ್ದಾರೆ. ಆಂಥೋನಿ ಕೌನ್ ಹೈ (2006), ಶಾದಿ ಕಾ ಲಡ್ಡೂ (1999) ಹಾಗೂ ಪ್ಯಾರ್ ಮೇ ಕಭಿ ಕಭಿ (1999) ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ. ಹಾಗೂ ನಿಖಿಲ್ (2005) ಹಾಗೂ ಪ್ಯಾರ್ ಮೇ ದಿಯಾ ಕಭಿ (1999) ಸಿನಿಮಾವನ್ನ ನಿರ್ಮಾಣ ಮಾಡಿದ್ದರು.
ರಾಜ್ ಕೌಶಲ್ ಹಾಗೂ ಮಂದಿರಾ ಬೇಡಿ ದಂಪತಿಗೆ ವೀರ್ ಎಂಬ ಪುತ್ರನಿದ್ದರೆ ತಾರಾ ಎಂಬ ಬಾಲಕಿಯನ್ನ ದತ್ತು ಪಡೆದಿದ್ದರು.
![](https://kannadadunia.com/wp-content/uploads/2021/06/m3_60dc3bb6c8807.jpeg)