ವಯಸ್ಸಾದಂತೆ ಕೂದಲು ಉದುರುವುದು ಸಾಮಾನ್ಯ.ಆದರೆ ಕೆಲವೊಮ್ಮೆ ಪೋಷಕಾಂಶಗಳ ಕೊರತೆ ಮತ್ತು ಕಳಪೆ ಆಹಾರದಿಂದಾಗಿ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಿಹೋಗುತ್ತದೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ ನಮ್ಮ ದೇಹವು ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕೂದಲು ನಿರ್ಜೀವವಾಗುತ್ತದೆ, ಒಣಗುತ್ತದೆ ಮತ್ತು ಒಡೆಯಲು ಪ್ರಾರಂಭಿಸುತ್ತದೆ. ಕೂದಲನ್ನು ದೀರ್ಘಕಾಲದವರೆಗೆ ದಪ್ಪವಾಗಿಡಲು ಬಯಸಿದರೆ ಪ್ರೋಟೀನ್ ನಿಮಗೆ ಸಹಾಯ ಮಾಡುತ್ತದೆ. ಈ ಪ್ರೋಟೀನ್ ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ ತಲೆ ಬೋಳಾಗುವುದನ್ನು ತಡೆಯಬಹುದು.
ಕೂದಲು ಅಮೈನೋ ಆಸಿಡ್ ಸರಪಳಿಗಳಿಂದ ಮಾಡಲ್ಪಟ್ಟಿದೆ. ಅಂದರೆ ಕೆರಟಿನ್ ಎಂಬ ಪ್ರೋಟೀನ್‌ನ ಘಟಕಗಳು. ಅತಿಯಾದ ಒತ್ತಡ, ಇತರ ಸಮಸ್ಯೆಗಳು, ಶಾಖ ಅಥವಾ ರಾಸಾಯನಿಕ ಚಿಕಿತ್ಸೆಯಿಂದಾಗಿ ಅವು ದುರ್ಬಲವಾಗುತ್ತವೆ. ಪ್ರೋಟೀನ್ ಭರಿತ ಆಹಾರಗಳನ್ನು ತಿನ್ನುವುದರಿಂದ ಕೂದಲು ಸ್ಟ್ರಾಂಗ್ ಆಗಿ ಹೊಳೆಯುತ್ತವೆ. ಕೂದಲಿನ ನೈಸರ್ಗಿಕ ಪ್ರೊಟೀನ್‌ಗಳು ಒಮ್ಮೆ ನಾಶವಾದರೆ ಅವುಗಳನ್ನು ಪುನರುತ್ಪಾದಿಸಲು ಸಾಧ್ಯವಿಲ್ಲ.
ಆದರೆ ಸಂಶ್ಲೇಷಿತ ಮತ್ತು ಪ್ರೋಟೀನ್-ಭರಿತ ಆಹಾರದಿಂದ ಇದನ್ನು ಸರಿಪಡಿಸಬಹುದು. ಕೂದಲಿಗೆ ಪ್ರೋಟೀನ್ ಸೇರಿಸುವ ಮೂಲಕ ಕಿರುಚೀಲಗಳನ್ನು ಪೋಷಿಸಬಹುದು. ಕೂದಲಿನ ಪೋಷಣೆಗೆ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು.
ಬೀನ್ಸ್
ದ್ವಿದಳ ಧಾನ್ಯಗಳು ಅಥವಾ ಬೀನ್ಸ್ ಪ್ರೋಟೀನ್‌ನ ಅತ್ಯುತ್ತಮ ಸಸ್ಯ ಆಧಾರಿತ ಮೂಲವಾಗಿದೆ. ಇದು ಕೂದಲಿನ ಬೆಳವಣಿಗೆಗೆ ಅವಶ್ಯಕ. ಸಮುದ್ರ ಆಹಾರಗಳಂತೆ ಬೀನ್ಸ್‌ನಲ್ಲಿ ಕೂಡ ಸತು ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆ ಮತ್ತು ದುರಸ್ತಿಗೆ ಸಹಕಾರಿ. 100 ಗ್ರಾಂ ಕಪ್ಪು ಬೀನ್ಸ್ ದೈನಂದಿನ ಸತುವಿನ ಅವಶ್ಯಕತೆಗಳಲ್ಲಿ ಶೇ.7ರಷ್ಟನ್ನು ಪೂರೈಸುತ್ತದೆ. ಇದಲ್ಲದೆ ಕೂದಲಿಗೆ ಅಗತ್ಯವಾದ ಕಬ್ಬಿಣ, ಬಯೋಟಿನ್ ಮತ್ತು ಫೋಲೇಟ್ ಮುಂತಾದ ಪೋಷಕಾಂಶಗಳು ಬೀನ್ಸ್‌ನಲ್ಲಿವೆ.
ಮೊಟ್ಟೆ
ಮೊಟ್ಟೆಗಳಲ್ಲಿ ಪ್ರೋಟೀನ್ ಮತ್ತು ಬಯೋಟಿನ್ ಸಂಕೀರ್ಣ ರೂಪದಲ್ಲಿ ಕಂಡುಬರುತ್ತವೆ. ಈ ಎರಡೂ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಉತ್ತಮ. ಕೂದಲನ್ನು ದಪ್ಪ ಮತ್ತು ಸುಂದರವಾಗಿಸಲು ಮೊಟ್ಟೆಯನ್ನು ನಿಯಮಿತವಾಗಿ ಸೇವಿಸಿ. ಹೆಚ್ಚಿನ ಕೂದಲು ಕಿರುಚೀಲಗಳು ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ. ಆದರೆ ಕೆರಟಿನ್ ಉತ್ಪಾದನೆಗೆ ಬಯೋಟಿನ್ ಅಗತ್ಯವಿದೆ. ಅದಕ್ಕಾಗಿಯೇ ಪ್ರೋಟೀನ್ ಮತ್ತು ಬಯೋಟಿನ್ ಅನ್ನು ಆಹಾರದಲ್ಲಿ ಸೇರಿಸಬೇಕು. ಈ ಎಲ್ಲಾ ಅಂಶಗಳು ಮೊಟ್ಟೆಯಲ್ಲಿವೆ.
ಮಾಂಸ
ಮಾಂಸದಲ್ಲಿ ಸಾಕಷ್ಟು ಪೋಷಕಾಂಶಗಳು ಕಂಡುಬರುತ್ತವೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿ. ಮಾಂಸದಲ್ಲಿರುವ ಪ್ರೋಟೀನ್ ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ. 100 ಗ್ರಾಂ ಬೇಯಿಸಿದ ಮಾಂಸದಲ್ಲಿ 29 ಗ್ರಾಂ ಪ್ರೋಟೀನ್ ಇರುತ್ತದೆ.