![](https://kannadadunia.com/wp-content/uploads/2022/04/5440bcbc-6fde-428c-8f00-2e9f64005183.jpg)
ಮಹಿಳೆಯರಲ್ಲಿ ದಾಂಪತ್ಯ ಜೀವನ ಮತ್ತು ಸಂತಾನೋತ್ಪತ್ತಿಗೆ ಕಾರಣವಾಗುವ ಈಸ್ಟ್ರೋಜನ್ ಹಾರ್ಮೋನ್ ವ್ಯತ್ಯಾಸದಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಲೈಂಗಿಕ ನಿರಾಸಕ್ತಿ, ಖಿನ್ನತೆ, ಕೂದಲು ಉದುರುವುದು, ತಲೆನೋವು, ಮುಟ್ಟಿನ ಅಸಮತೋಲನ, ನೆನಪಿನ ಶಕ್ತಿಯ ಕೊರತೆ, ತೂಕ ನಷ್ಟ, ಮೂಡ್ ಸ್ವಿಂಗ್ಸ್ ಈ ಎಲ್ಲಾ ಲಕ್ಷಣಗಳು ಈಸ್ಟ್ರೋಜನ್ ಕೊರತೆಯನ್ನು ಎತ್ತಿ ತೋರಿಸುತ್ತವೆ.
ಈ ನಿಟ್ಟಿನಲ್ಲಿ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಿಸಿಕೊಳ್ಳುವುದು ಹೇಗೆ ಅನ್ನೋ ವಿವರಣೆ ಇಲ್ಲಿದೆ ಗಮನಿಸಿ.
ವೈದ್ಯರ ಭೇಟಿ : ಮೇಲಿನ ಎಲ್ಲಾ ಲಕ್ಷಣಗಳು ನಿಮ್ಮಲ್ಲಿದ್ದರೆ ಮೊದಲು ವೈದ್ಯರನ್ನು ಭೇಟಿಯಾಗಿ ಅದನ್ನು ದೃಢಪಡಿಸಿಕೊಳ್ಳಿ.
ಆಹಾರ ಕ್ರಮ ಬದಲಾವಣೆ : ಏಪ್ರಿಕಾಟ್, ಎಲೆಕೋಸು, ಬ್ರೊಕೋಲಿ, ಕುಂಬಳ ಬೀಜ, ಅಗಸೇ ಬೀಜ, ಧಾನ್ಯಗಳು, ಸೋಯಾ, ಟೋಫು, ಡ್ರೈ ಫ್ರೂಟ್ಸ್ ಹೆಚ್ಚಾಗಿ ಬಳಸಿ. ಮೆಗ್ನಿಶಿಯಂ ಅಂಶ ಹೆಚ್ಚಾಗಿರುವ ಆಹಾರ ಸೇವಿಸಿ.
ಹರ್ಬಲ್ ಟೀ : ಮೂಲಿಕೆಗಳಿಂದ , ಚೂರ್ಣಗಳಿಂದ ತಯಾರಾಗುವ ಹರ್ಬಲ್ ಟೀ ಸೇವನೆ ಈಸ್ಟ್ರೋಜನ್ ಹೆಚ್ಚಿಸಲು ಸಹಕಾರಿ.
ಕಾಫಿ : ಸಣ್ಣ ಕಪ್ ಕಾಫಿ ಸೇವನೆಯೂ ಈಸ್ಟ್ರೋಜನ್ ಕೊರತೆ ನೀಗಿಸಿ ನಿಮ್ಮನ್ನು ಉಲ್ಲಾಸಭರಿತರನ್ನಾಗಿ ಮಾಡುತ್ತದೆ. ಆದರೆ ಅಡಿಕ್ಷನ್ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.
ವ್ಯಾಯಾಮ : ಹಿತ ಮಿತವಾಗಿ ವ್ಯಾಯಾಮ ಅಳವಡಿಸಿಕೊಳ್ಳಿ. ಈಸ್ಟ್ರೋಜನ್ ಸಮತೋಲನದಲ್ಲಿಡಲು ನೆರವಾಗುವ ವರ್ಕ್ಔಟ್, ಆಸನಗಳಿಗೆ ಹೆಚ್ಚು ಆದ್ಯತೆ ನೀಡಿ.
ನೀರು : ದಿನ ನಿತ್ಯ ನೀರು, ಎಳನೀರು, ಮಜ್ಜಿಗೆ, ಜ್ಯೂಸ್, ಹರ್ಬಲ್ ಟೀ ಸೇರಿದಂತೆ ಮೂರು ಲೀಟರ್ನಷ್ಟು ದ್ರವ ದೇಹ ಸೇರಬೇಕು.