
ಶಿವಮೊಗ್ಗ: ವನ್ಯಜೀವಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆಯಾಡಿ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಶಿವಮೊಗ್ಗ ವನ್ಯಜೀವಿ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಬಾಳೆಕೊಪ್ಪದ ಸತೀಶ್ (39), ಯಡೇಹಳ್ಳಿ ಟಿ.ನಾಗರಾಜ್ (23) ಪ್ರಜ್ವಲ್(23) ಬಂಧಿತ ಆರೋಪಿಗಳು. ಇವರು ಶರಾವತಿ ಸಿಂಘಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ನಾಡಬಂದೂಕಿನಿಂದ ಜಿಂಕೆ ಬೇಟೆಯಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಜಿಂಕೆ ಚರ್ಮ, ಜಿಂಕೆ ತಲೆ, ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.